ADVERTISEMENT

ಕ್ಯಾನ್ಸರ್‌ ಶಸ್ತ್ರಚಿಕಿತ್ಸೆ: ಶೂಟಿಂಗ್‌ಗೆ ಮರಳಿದ ನಟ ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 13:20 IST
Last Updated 6 ಮಾರ್ಚ್ 2025, 13:20 IST
ಶಿವರಾಜ್‌ಕುಮಾರ್‌, ಬುಚ್ಚಿ ಬಾಬು ಸನಾ 
ಶಿವರಾಜ್‌ಕುಮಾರ್‌, ಬುಚ್ಚಿ ಬಾಬು ಸನಾ    

ಅಮೆರಿಕದಲ್ಲಿ ಮೂತ್ರಕೋಶ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮರಳಿರುವ ನಟ ಶಿವರಾಜ್‌ಕುಮಾರ್‌ ಸುಮಾರು ಎರಡೂವರೆ ತಿಂಗಳ ಬಳಿಕ ಶೂಟಿಂಗ್‌ಗೆ ಮರಳಿದ್ದಾರೆ. 

ಕಾರ್ತಿಕ್‌ ಅದ್ವೈತ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘#131’ ಸಿನಿಮಾದ ಮೊದಲ ಹಂತದ ಚಿತ್ರೀಕರಣದ ಬಳಿಕ ಡಿಸೆಂಬರ್‌ನಲ್ಲಿ ಶಿವರಾಜ್‌ಕುಮಾರ್‌ ಶಸ್ತ್ರಚಿಕಿತ್ಸಗೆ ತೆರಳಿದ್ದರು. ಇದೀಗ ಈ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಪುನರಾರಂಭವಾಗಿದ್ದು, ಶಿವರಾಜ್‌ಕುಮಾರ್‌ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಸೆಂಚುರಿ ಸ್ಟಾರ್‌ 131ನೇ ಸಿನಿಮಾ ಇದಾಗಿದ್ದು, ನವೀನ್‌ ಶಂಕರ್ ಅವರೂ ಬಣ್ಣಹಚ್ಚುತ್ತಿದ್ದಾರೆ. ಈ ಸಿನಿಮಾದ ಜೊತೆಗೆ ನಟ ರಾಮ್‌ಚರಣ್‌ ನಟನೆಯ 16ನೇ ಸಿನಿಮಾದಲ್ಲೂ ಶಿವರಾಜ್‌ಕುಮಾರ್‌ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದು, ಇತ್ತೀಚೆಗೆ ತಮ್ಮ ಪಾತ್ರದ ಲುಕ್‌ ಟೆಸ್ಟ್‌ ನೀಡಿ ಬಂದಿದ್ದಾರೆ. ಇದು ರಾಮ್‌ಚರಣ್‌ ಹಾಗೂ ಶಿವರಾಜ್‌ಕುಮಾರ್‌ ಜೊತೆಯಾಗಿ ನಟಿಸುತ್ತಿರುವ ಮೊದಲ ಸಿನಿಮಾವಾಗಿದೆ. ಶೀಘ್ರದಲ್ಲೇ ಅವರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ಈ ಚಿತ್ರವನ್ನು ಬುಚ್ಚಿ ಬಾಬು ಸನಾ ನಿರ್ದೇಶಿಸುತ್ತಿದ್ದು, ಜಾಹ್ನವಿ ಕಪೂರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT