ADVERTISEMENT

‘ಆಪರೇಷನ್‌..’ ಆರಂಭಿಸಿದ ಡಾಲಿ–ಶಿವಣ್ಣ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 23:42 IST
Last Updated 21 ಆಗಸ್ಟ್ 2025, 23:42 IST
ಧನಂಜಯ 
ಧನಂಜಯ    

‘ಕವಲುದಾರಿ’, ‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್‌ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್‌ ಆರಂಭವಾಗಿದೆ. 

ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಅದ್ದೂರಿಯಾದ ಸೆಟ್‌ ಹಾಕಿ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ನಟ ಶಿವರಾಜ್‌ಕುಮಾರ್‌ ಹಾಗೂ ಡಾಲಿ ಧನಂಜಯ ಭಾಗಿಯಾಗಿದ್ದಾರೆ. ಆ.23 ಧನಂಜಯ ಅವರ ಜನ್ಮದಿನವಾಗಿದ್ದು ಈ ಹಿನ್ನೆಲೆಯಲ್ಲಿ ಚಿತ್ರತಂಡ ಅವರ ಪಾತ್ರದ ಹೊಸ ಫೋಟೊ ಬಿಡುಗಡೆ ಮಾಡಿದೆ. ರೆಟ್ರೋ ಗೆಟಪ್‌ನಲ್ಲಿ ಧನಂಜಯ ಕಾಣಿಸಿಕೊಂಡಿದ್ದು, ಕೈಯಲ್ಲಿ ಗನ್ ಹಿಡಿದು ಕಾರಿನಲ್ಲಿ ಕನಸು ಕಾಣುತ್ತಾ ಸ್ಟೈಲಿಶ್ ಆಗಿ ಕ್ಯಾಮೆರಾಗೆ ಫೋಸ್ ಕೊಟ್ಟಿದ್ದಾರೆ.

ಧನಂಜಯ ಹಾಗೂ ಶಿವರಾಜ್‌ಕುಮಾರ್‌ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಡಾ.ವೈಶಾಖ್‌ ಜೆ. ಗೌಡ ಅವರ ‘ವೈಶಾಖ್‌ ಜೆ. ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚರಣ್ ರಾಜ್ ಸಂಗೀತ ನಿರ್ದೇಶನ, ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣ ಈ ಸಿನಿಮಾಗಿದೆ. ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.