ADVERTISEMENT

‘ಸಿದ್ಲಿಂಗು-2’ ಚಿತ್ರೀಕರಣ ಪೂರ್ಣ: ಸೋನುಗೌಡ ನಾಯಕಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2024, 20:30 IST
Last Updated 12 ಡಿಸೆಂಬರ್ 2024, 20:30 IST
   

ಲೂಸ್‌ ಮಾದ ಯೋಗಿ, ರಮ್ಯಾ ಜೋಡಿಯಾಗಿ ನಟಿಸಿದ್ದ ‘ಸಿದ್ಲಿಂಗು’ ಹೊಸರೀತಿಯ ನಿರೂಪಣೆಯಿಂದ ಜನಮನ್ನಣೆ ಗಳಿಸಿತ್ತು. ಆ ಸಿನಿಮಾ ತೆರೆಕಂಡು 12 ವರ್ಷಗಳ ಬಳಿಕ ಸೆಟ್ಟೇರಿದ ‘ಸಿದ್ಲಿಂಗು-2’ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ.

‘ತೋತಾಪುರಿ’ ಬಳಿಕ ನಿರ್ದೇಶಕ ವಿಜಯ್ ಪ್ರಸಾದ್‌ ‘ಸಿದ್ಲಿಂಗು’ ಸೀಕ್ವೆಲ್ ಕಥೆಯನ್ನು ಕೈಗೆತ್ತಿಕೊಂಡಿದ್ದರು. ‘ಜಮಾಲಿಗುಡ್ಡ’ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ನಿಹಾರಿಕಾ ಫಿಲ್ಮ್ಸ್‌ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

‘ಸಿದ್ಲಿಂಗು ಹಾಸ್ಯ, ಸಂಬಂಧಗಳು, ಪ್ರೀತಿ, ಭಾವನೆಗಳಿಂದ ಜನರ ಮೆಚ್ಚುಗೆ ಗಳಿಸಿತ್ತು. ಇಲ್ಲಿ ಬರೀ ಮೀನಿಂಗ್ ಇರಲಿದೆ. ನನ್ನ ಹಿಂದಿನ ಸಿನಿಮಾಗಳಂತೆ ಡಬಲ್ ಮೀನಿಂಗ್ ಇರುವುದಿಲ್ಲ. ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದ್ದು, ಒಂದು ಹಾಡನ್ನು ಜಮ್ಮು–ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ’ ಎಂದಿದ್ದಾರೆ ನಿರ್ದೇಶಕ.

ADVERTISEMENT

‘ಕಿರಗೂರಿನ ಗಯ್ಯಾಳಿಗಳು’ ಖ್ಯಾತಿಯ ಸೋನುಗೌಡ ನಾಯಕಿ. ಅನೂಪ್ ಸೀಳಿನ್ ಸಂಗೀತ, ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕಿದೆ. ಪದ್ಮಜಾ ರಾಜ್, ಆಂಟೋನಿ ಕಮಲ್, ಮಹಾಂತೇಶ್ ಸೇರಿದಂತೆ ದೊಡ್ಡ ತಾರಾಗಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.