ADVERTISEMENT

ಸೈಮಾ ಅವಾರ್ಡ್ಸ್‌ ಬೆಂಗಳೂರಿನಲ್ಲೇ ಏಕೆ?

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 19:30 IST
Last Updated 25 ಆಗಸ್ಟ್ 2022, 19:30 IST
.
.   

ದಕ್ಷಿಣ ಭಾರತದ ಚಿತ್ರರಂಗದ ಪ್ರತಿಷ್ಠಿತ ‘ಸೈಮಾ’ ಪ್ರಶಸ್ತಿ ಪ್ರದಾನ ಸಮಾರಂಭ ಈ ಬಾರಿ ಬೆಂಗಳೂರಿನಲ್ಲಿ ನಡೆಯಲಿದೆ. ಈ ಪ್ರಶಸ್ತಿ ಸ್ಥಾಪನೆಯ ದಶಮಾನೋತ್ಸವ ಆಚರಣೆಯ ಗರಿಯೂ ಬೆಂಗಳೂರಿಗೆ ಸಲ್ಲುತ್ತದೆ. ಇನ್ನೂ ವಿಶೇಷ ಏನು ಗೊತ್ತಾ? ಇತ್ತೀಚೆಗೆ ಕನ್ನಡ ಚಿತ್ರಗಳು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸೂಪರ್‌ ಹಿಟ್‌ ಆಗಿ ಗಮನ ಸೆಳೆಯುತ್ತಿರುವುದೂ ಈ ಸಮಾರಂಭ ಇಲ್ಲಿ ಆಯೋಜಿಸಲು ಮುಖ್ಯ ಕಾರಣ ಎಂದಿದ್ದಾರೆ ಆಯೋಜಕರು.

ಈ ಸಮಾರಂಭವನ್ನು ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಗೌರವಾರ್ಥ ಇಲ್ಲಿ ಏರ್ಪಡಿಸಲಾಗುತ್ತಿದೆ ಎಂದಿದ್ದಾರೆ ‘ಸೈಮಾ’ ಮುಖ್ಯಸ್ಥೆ ಬೃಂದಾ ಪ್ರಸಾದ್‌.

ನಟರಾದ ರಾಣಾ ದಗ್ಗುಬಾಟಿ, ಡಾಲಿ ಧನಂಜಯ್‌, ನಟಿಯರಾದ ಶಾನ್ವಿ ಶ್ರೀವಾಸ್ತವ್‌, ಫರಿಯಾ ಅಬ್ದುಲ್ಲಾ, ಶ್ರೀಲೀಲಾ ಅವರು ಕಾರ್ಯಕ್ರಮದ ಅಧಿಕೃತ ಘೋಷಣಾ ಕಾರ್ಯಕ್ರಮದಲ್ಲಿ ಇದ್ದರು.

ADVERTISEMENT

ಸಾಮಾಜಿಕ ಜಾಲತಾಣಗಳು ಹಾಗೂ ‘ಸೈಮಾ’ ಜಾಲತಾಣಗಳಲ್ಲಿ 2021ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳ, ಕಲಾವಿದರ ಪರ ಮತದಾನ ಆರಂಭವಾಗಿದೆ. ಸೆಪ್ಟೆಂಬರ್‌ 10ರಂದು ಚಿತ್ರಪ್ರೇಮಿಗಳ ಕುತೂಹಲಕ್ಕೆ ಉತ್ತರ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.