ADVERTISEMENT

ಸರಿಯಾಗಿ ನೆನಪಿದೆ ನನಗೆ... | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅರ್ಮಾನ್ ಮಲಿಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2025, 9:22 IST
Last Updated 2 ಜನವರಿ 2025, 9:22 IST
<div class="paragraphs"><p>ಅರ್ಮಾನ್ ಮಲಿಕ್ ಮತ್ತು&nbsp;ಆಶ್ನಾ ಶ್ರಾಫ್‌</p></div>

ಅರ್ಮಾನ್ ಮಲಿಕ್ ಮತ್ತು ಆಶ್ನಾ ಶ್ರಾಫ್‌

   

ಚಿತ್ರಕೃಪೆ: ಇನ್‌ಸ್ಟಾಗ್ರಾಂ

ಜನಪ್ರಿಯ ಸಂಗೀತ ನಿರ್ದೇಶಕ, ಬಹುಭಾಷಾ ಗಾಯಕ ಅರ್ಮಾನ್‌ ಮಲಿಕ್‌ ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್‌ಗೆ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ADVERTISEMENT

2023ರ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಒಂದೂವರೆ ವರ್ಷದ ಬಳಿಕ ಹೊಸ ಜೀವನ ಪ್ರಾರಂಭಿಸಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಂದರ ಕ್ಷಣಗಳ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿವಾಹದ ಶುಭ ಸಂದರ್ಭದಲ್ಲಿ ವಧು ಆಶ್ನಾ ಅವರು ಕಿತ್ತಳೆ ಬಣ್ಣದ ಲೆಹಂಗಾದಲ್ಲಿ ಕಂಗೊಳಿಸಿದರೆ, ತಿಳಿ ಗುಲಾಬಿ ಬಣ್ಣದ ಶೆರ್ಮಾನಿ ಸೂಟ್‌ನಲ್ಲಿ ಅರ್ಮಾನ್‌ ಮಿಂಚಿದ್ದಾರೆ. ಕುಟುಂಬ ಸದಸ್ಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ಸೇರಿದಂತೆ ಹಲವು ಭಾಷೆಗಳ ಜನಪ್ರಿಯ ಹಾಡುಗಳಿಗೆ ಅರ್ಮಾನ್ ಧ್ವನಿಯಾಗಿದ್ದಾರೆ. ನಟ ಗಣೇಶ್‌ ನಟನೆಯ ‘ಮುಂಗಾರು ಮಳೆ –2’ ಚಿತ್ರದ ‘ಸರಿಯಾಗಿ ನೆನಪಿದೆ ನನಗೆ...’ ಮತ್ತು ನಟ ದರ್ಶನ್ ಅಭಿನಯದ ‘ಚಕ್ರವರ್ತಿ’ ಚಿತ್ರದ ‘ಒಂದು ಮಳೆಬಿಲ್ಲು, ಒಂದು ಮಳೆ ಮೋಡ’ ಅರ್ಮಾನ್ ಹಾಡಿದ ಜನಪ್ರಿಯ ಕನ್ನಡ ಹಾಡುಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.