ADVERTISEMENT

ಗುರುಕಿರಣ್ ಅವರ 40 ವರ್ಷದ ಗಾಯನ ಪಯಣಕ್ಕೆ ಸಿನಿ ತಾರೆಯರ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2026, 9:11 IST
Last Updated 27 ಜನವರಿ 2026, 9:11 IST
   

ಗಾಯಕ ಗುರುಕಿರಣ್  ಅವರು ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಾರೆ. ಈ  ಹಿನ್ನಲೆ ಅಶ್ವಿನಿ ಪುನೀತ್ ರಾಜ್‌ಕುಮಾರ್, ನಟ ವಿಜಯ್ ರಾಘವೇಂದ್ರ ಸೇರಿ ಅನೇಕರು ಶುಭಕೋರಿದ್ದಾರೆ. 

ಗುರುಕಿರಣ್ ಅವರಿಗೆ ಶುಭ ಕೋರಿದ ನಟ ವಿಜಯ್ ರಾಘವೇಂದ್ರ ಅವರು, ‘ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಗುರು ಅಣ್ಣಾ ನಿಮಗೆ ಇನ್ನಷ್ಟು ಒಳ್ಳೆಯದಾಗಲಿ. ನನ್ನ ಜೀವನದಲ್ಲಿ ನೀವು ತುಂಬಾ ವಿಶೇಷ ಪಾತ್ರವಹಿಸಿದ್ದೀರಿ. ನನ್ನ ನಟನೆಯ ‘ನಿನಗಾಗಿ’ ಚಿತ್ರದ ‘ಎಲ್ಲೆಲ್ಲಿ ನಾ ನೋಡಲಿ...ನಿನ್ನದೇ ಚಿಲಿಪಿಲಿ’ ಸೇರಿ ಅನೇಕ ಹಾಡುಗಳನ್ನು ಹಾಡಿದ್ದೀರಾ. ನಿಮ್ಮ ಧ್ವನಿಗೆ ನಾನು ಕೂಡ ದೊಡ್ಡ ಅಭಿಮಾನಿ’ ಎಂದು ಹೇಳಿಕೊಂಡಿದ್ದಾರೆ.

‘ಕಂಗ್ರಾಜುಲೇಷನ್ ಗುರು ಅಣ್ಣ.. 40 ವರ್ಷದ ಹಾಡಿನ ಪಯಣಕ್ಕೆ ಶುಭವಾಗಲಿ ಎಂದು ನಟಿ ಪ್ರಿಯಂಕಾ ಉಪೇಂದ್ರ ಅವರು ಶುಭಕೋರಿದ್ದಾರೆ.

ಗುರುಕಿರಣ್ ಅವರ 40 ವರ್ಷದ ಹಾಡಿನ ಪಯಣವನ್ನು ಸಂಭ್ರಮಿಸಲು ದುಬೈನಲ್ಲಿ  ‘ಗುರುಕಿರಣ್ ನೈಟ್’ ಸಂಗೀತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇನ್ನೂ ಕಾರ್ಯಕ್ರಮದಲ್ಲಿ ಗಾಯಕಿ ಅನುರಾಧ ಭಟ್ ಹಾಗೂ ಐಶ್ವರ್ಯ ರಂಗರಾಜನ್ ಅವರು ಹಾಡು ಹಾಡಿ ಈ  ಕಾರ್ಯಕ್ರಮಕ್ಕೆ ಇನ್ನಷ್ಟು ಮೆರೆಗು ನೀಡಿದ್ದಾರೆ.

ಗುರು ಕಿರಣ್ ಅವರು ‘ಉಪೇಂದ್ರ’ ಚಿತ್ರದ 'ಉಪ್ಪಿಗಿಂತ ರುಚಿಯಿಲ್ಲ', ‘ಅಪ್ಪು’ ಚಿತ್ರದ ‘ಆ ದೇವರ ಹಾಡಿದು.. ನಮ್ಮಂತೆ ಎಂದೂ ಇರದು', ‘ತಾಲಿಬಾನ್ ಅಲ್ಲ ಅಲ್ಲ’ ‘ಅರಮನೆ’ ಚಿತ್ರದ ಕೊಲ್ಲೆ ನನ್ನನ್ನೇ' ಸೇರಿ ಅನೇಕ ಹಾಡುಗಳು ಧ್ವನಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT