ADVERTISEMENT

‘ಮಿ. ಲೋಕಲ್’ ಕೌಟುಂಬಿಕ ಚಿತ್ರ

​ಪ್ರಜಾವಾಣಿ ವಾರ್ತೆ
Published 21 ಮೇ 2019, 15:52 IST
Last Updated 21 ಮೇ 2019, 15:52 IST
ಶಿವಕಾರ್ತಿಕೇಯನ್‌–ನಯನತಾರಾ
ಶಿವಕಾರ್ತಿಕೇಯನ್‌–ನಯನತಾರಾ   

ನಟ ಶಿವ ಕಾರ್ತಿಕೇಯನ್ ತಮ್ಮ ಮುಂಬರುವ ಚಿತ್ರ ‘ಮಿ. ಲೋಕಲ್‌’ನಲ್ಲಿ ಬಾರ್ ಸಾಂಗ್ ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ದೃಶ್ಯಗಳಿರುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಹಿಂದಿನ ಸಿನಿಮಾ ‘ರೆಮೊ’ದಲ್ಲಿ ಇಂಥ ಆಕ್ಷೇಪಾರ್ಹ ದೃಶ್ಯಗಳ ಕಾರಣಕ್ಕಾಗಿ ಶಿವ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ತೀವ್ರ ಟೀಕೆಗೊಳಗಾಗಿದ್ದರು.

‘ಮಿ.ಲೋಕಲ್’ಸಿನಿಮಾದ ನಿರ್ದೇಶಕ ರಾಜೇಶ್ ಎಂ. ಈಚೆಗೆ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ಕರೆದು, ‘ಶಿವ ಅವರ ಸೂಚನೆಯ ಮೇರೆಗೆ ನನ್ನ ಸಿನಿಮಾದಲ್ಲಿ ಬಾರ್ ಸಾಂಗ್ ಮತ್ತು ಮಹಿಳಾ ದೌರ್ಜನ್ಯದ ದೃಶ್ಯಗಳಿಲ್ಲ. ಸಾಮಾನ್ಯವಾಗಿ ನನ್ನ ಸಿನಿಮಾದಲ್ಲಿ ಒಂದಾದರೂ ಇಂಥ ದೃಶ್ಯಗಳಿರುತ್ತವೆ. ಆದರೆ, ಶಿವ ಅವರ ಕೋರಿಕೆಯ ಮೇರೆಗೆ ಇಂಥ ದೃಶ್ಯಗಳಿಗೆ ನನ್ನ ಸಿನಿಮಾದಲ್ಲಿ ಕಡಿವಾಣ ಹಾಕಿದ್ದೇನೆ’ ಎಂದವರು ಹೇಳಿದ್ದಾರೆ.

‘ಮಿ. ಲೋಕಲ್’ ಶುಕ್ರವಾರ ತೆರೆ ಕಾಣಲಿದ್ದು, ಶಿವ ಅವರಿಗೆ ಜೋಡಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ರಾಧಿಕಾ ಶರತ್ ಕುಮಾರ್, ಯೋಗಿಬಾಬು, ಸತೀಶ್, ರೊಬೊ ಶಂಕರ್ ಮತ್ತಿತರರು ಈ ಸಿನಿಮಾದಲ್ಲಿದ್ದಾರೆ. ನಯನ–ಶಿವ ಈ ಹಿಂದೆ ‘ವೇಲೈಕ್ಕರನ್’ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದರು.

ADVERTISEMENT

ವೇಲೈಕ್ಕರನ್ ಸಿನಿಮಾದಲ್ಲಿ ನಯನ ಅವರ ಪ್ರತಿಭೆಗೆ ತಕ್ಕಂತೆ ನಟನೆಗೆ ಹೆಚ್ಚಿನ ಅವಕಾಶ ದೊರೆತಿರಲಿಲ್ಲ. ಈ ಬಗ್ಗೆ ನನಗೂ ಬೇಸರವಿತ್ತು. ಆದರೆ,‘ಮಿ. ಲೋಕಲ್‌’ನಲ್ಲಿ ಆ ಕೊರತೆಯನ್ನು ನಯನ ನೀಗಿಸಿದ್ದಾರೆ. ಇದು ಅಪ್ಪಟ ಮನರಂಜನೆಯ ಸಿನಿಮಾ. ಕುಟುಂಬ ಸಮೇತ ನೋಡಬಹುದಾದ ಸಿನಿಮಾ’ ಎಂದು ಶಿವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.