ADVERTISEMENT

ಗಾಯಕನ ಜೊತೆ ಸ್ಮೃತಿ ಮಂದಾನ ನಿಶ್ಚಿತಾರ್ಥ: ಮೋದಿ ಶುಭಾಶಯ

ಪಿಟಿಐ
Published 21 ನವೆಂಬರ್ 2025, 9:49 IST
Last Updated 21 ನವೆಂಬರ್ 2025, 9:49 IST
<div class="paragraphs"><p>ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ</p></div>

ಪಲಾಶ್ ಮುಚ್ಚಲ್ ಹಾಗೂ ಸ್ಮೃತಿ ಮಂಧಾನ

   

ಚಿತ್ರ: @CricCrazyJohns


ADVERTISEMENT

ನವದೆಹಲಿ: ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಅವರು ಗಾಯಕ ಪಲಾಶ್ ಮುಚ್ಚಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನವ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿಂದತೆ ಅನೇಕರು ಶುಭಾಶಯ ಕೋರಿದ್ದಾರೆ.

ಸ್ಮೃತಿ ಮಂದಾನ ಅವರು ನಿಶ್ಚಿತಾರ್ಥ ಸಮಾರಂಭದಲ್ಲಿ ತನ್ನ ಸಹ ಆಟಗಾರ್ತಿಯರಾದ ರಾಧಾ ಯಾದವ್, ಜೆಮಿಮಾ ರಾಡ್ರಿಗಸ್, ಶ್ರೇಯಾಂಕ ಪಾಟೀಲ್ ಮತ್ತು ಅರುಂಧತಿ ರೆಡ್ಡಿ ಅವರೊಂದಿಗೆ ನೃತ್ಯ ಮಾಡಿದ್ದಾರೆ. ಮತ್ತು ನಿಶ್ಚಿತಾರ್ಥದ ಉಂಗುರವನ್ನು ಪ್ರದರ್ಶಿಸುತ್ತಾ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಸ್ಮೃತಿ ಮಂದಾನ ಅವರ ನಿಶ್ಚಿತಾರ್ಥ ಉಂಗುರ ಪ್ರದರ್ಶನದ ವಿಡಿಯೋವನ್ನು ಜೆಮಿಮಾ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ 1.9 ಮಿಲಿಯನ್‌ಗಿಂತಲೂ ಅಧಿಕ ಮೆಚ್ಚುಗೆಗಳು ಮತ್ತು 12,000ಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿವೆ. ಮಂಧಾನ ಮತ್ತು ಮುಚ್ಚಲ್ ನವೆಂಬರ್ 23 ರಂದು ವಿವಾಹವಾಗಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಮಂದಾನ ಅವರಿಗೆ ಪತ್ರದ ಮೂಲಕ ಸಂದೇಶ ಕಳಿಸಿ ನವ ಜೋಡಿಗೆ ಶುಭ ಕೋರಿದ್ದಾರೆ. ಮಂದಾನ ಅವರ ಕವರ್ ಡ್ರೈವ್‌ ಹಾಗೂ ಪಲಾಶ್ ಮುಚ್ಚಲ್ ಅವರ ಸಂಗೀತ ಸಂಯೋಜನೆಯಂತೆ ಇಬ್ಬರೂ ಅದ್ಭುತ ಜೀವನ ನಡೆಸುವುದನ್ನು ನಿರೀಕ್ಷಿಸುವುದಾಗಿ ಬರೆದಿದ್ದಾರೆ.

ಮಂದಾನ ದಂಪತಿಗೆ ಪ್ರಧಾನಿ ಮೋದಿ ಬರೆದ ಪತ್ರ

‘ದಂಪತಿಯಾಗಿ ಜೀವನದ ಪ್ರತಿಯೊಂದು ಹಂತದಲ್ಲೂ ಕೈಜೋಡಿಸಿ ನಡೆಯುವಾಗ, ಪರಸ್ಪರ ಜೊತೆಯಾಗಿ ಅದ್ಭುತ ಜೀವನ ಕಂಡುಕೊಳ್ಳಿ. ನಿಮ್ಮ ಹೃದಯಗಳು, ಮನಸ್ಸುಗಳು ಮತ್ತು ಆತ್ಮಗಳು ಸಾಮರಸ್ಯದಿಂದ ಒಂದಾಗಿರಲಿ. ಇಬ್ಬರ ಕನಸುಗಳು ನನಸಾಗಲಿ. ಒಟ್ಟಾಗಿ ಬೆಳೆಯಿರಿ. ಸಂತೋಷ ತುಂಬಿದ ಜೀವನ ನಿಮ್ಮದಾಗಲಿ’ ಎಂದು ಅವರು ನರೇಂದ್ರ ಮೋದಿಯವರು ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.