ADVERTISEMENT

ನೀಲಿ ಸಿನಿಮಾಗಳಲ್ಲಿ ತೊಡಗಿಕೊಂಡವರು ಕೆಟ್ಟವರಲ್ಲ: ನಟಿ ಸೋಮಿ ಅಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2021, 12:15 IST
Last Updated 28 ಜುಲೈ 2021, 12:15 IST
 ಸೋಮಿ ಅಲಿ
ಸೋಮಿ ಅಲಿ   

ಮುಂಬೈ:ನೀಲಿ ಸಿನಿಮಾಗಳಲ್ಲಿ ನಟಿಸುವುದು ತಪ್ಪಲ್ಲ ಎಂದು ಬಾಲಿವುಡ್‌ ನಟಿ ಹಾಗೂ ನಟ ಸಲ್ಮಾನ್‌ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ ಹೇಳಿದ್ದಾರೆ.

ಸೋಮಿ ಅಲಿ ಅವರು ಇತ್ತೀಚೆಗೆ ಪಿಂಕ್‌ವಿಲ್ಲಾ ಸಿನಿಮಾ ಸುದ್ದಿ ತಾಣಕ್ಕೆ ನೀಡಿದ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.

ರಾಜ್‌ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿ ಕೂಡ ಪತಿ ಪರವಾಗಿ ಬ್ಯಾಟ್‌ ಬೀಸಿದ್ದಾರೆ. ಭಾರತದಲ್ಲಿ ಶೃಂಗಾರದಂತಹ ವಿಡಿಯೊ ನಿರ್ಮಾಣಕ್ಕೆ ಅವಕಾಶವಿದೆ ಎಂದು ಹೇಳುವ ಮೂಲಕ ರಾಜ್ ಕುಂದ್ರಾ ನೀಲಿ ಚಿತ್ರಗಳನ್ನು ನಿರ್ಮಾಣ ಮಾಡಿಲ್ಲ ಎಂದು ಹೇಳಿದ್ದಾರೆ.

ADVERTISEMENT

ನೀಲಿ ಚಿತ್ರಗಳ ನಿರ್ಮಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್‌ ಕುಂದ್ರಾ ನ್ಯಾಯಾಂಗ ಬಂಧನದಲ್ಲಿರುವ ಬೆನ್ನಲ್ಲೇನೀಲಿ ಸಿನಿಮಾಗಳಲ್ಲಿ ನಟಿಸುವುದು ತಪ್ಪಲ್ಲ ಎಂದು ಸೋಮಿ ಅಲಿ ಹೇಳಿದ್ದಾರೆ.

ನೀಲಿ ಚಿತ್ರಗಳಲ್ಲಿ ನಟಿಸುವುದು ತಪ್ಪಲ್ಲ ಹಾಗೇ ಅಂತಹ ವಿಡಿಯೊಗಳ ನಿರ್ಮಾಣ ಮತ್ತು ನಿರ್ದೇಶನ ಮಾಡುವುದು ಕೂಡ ತಪ್ಪಲ್ಲ, ಇದರಲ್ಲಿ ತೊಡಗಿಸಿಕೊಳ್ಳುವವರನ್ನು ನಾವು ಕೆಟ್ಟವರೆಂದು ಭಾವಿಸಬಾರದು ಎಂದು ಹೇಳಿದ್ದಾರೆ.

ಇದರಲ್ಲಿ ತೊಡಗಿಕೊಂಡವರು ಲೈಂಗಿಕ ದೌರ್ಜನ್ಯ ಅಥವಾ ಹಣಕಾಸಿನ ಮೋಸ ಮಾಡಬಾರದು. ಹಾಗೇ ಮಾಡಿದರೆ ಅದು ತಪ್ಪು ಎಂದು ಸೋಮಿ ಅಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.