ADVERTISEMENT

ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಲು ಸೋನು ಸೂದ್‌ ಕರೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 9:36 IST
Last Updated 7 ಆಗಸ್ಟ್ 2021, 9:36 IST
ಸೋನು ಸೂದ್‌
ಸೋನು ಸೂದ್‌   

ನಟ ಸೋನು ಸೂದ್‌ ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸಬೇಕು ಎಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಮೂಲಕ ಹೇಳಿದ್ದಾರೆ.

ಇತ್ತೀಚೆಗೆ ಸೋನು ಸೂದ್‌ ಜಮ್ಮ ಮತ್ತು ಕಾಶ್ಮಿರಕ್ಕೆ ಭೇಟಿ ನೀಡಿದ್ದರು. ಶ್ರೀನಗರದಲ್ಲಿ ಫುಟ್‌ಪಾತ್‌ ಮೇಲೆ ವ್ಯಾಪಾರ ಮಾಡುವವರ ಬಳಿ ಸರಕುಗಳನ್ನು ಖರೀದಿಸಿ, ಸ್ಥಳೀಯ ವ್ಯಾಪಾರಿಗಳನ್ನು ಬೆಂಬಲಿಸುವ ಮೂಲಕ ಅವರನ್ನು ಬೆಳೆಸಬೇಕು ಎಂದು ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಲಾಕ್‌ಡೌನ್‌ ಸಮಯದಲ್ಲಿ ಬಡವರಿಗೆ ನೆರವು ನೀಡುವ ಮೂಲಕ ಸೋನು ಸೂದ್‌ ದೇಶದಾದ್ಯಂತ ಸುದ್ದಿಯಾಗಿದ್ದರು. ಅವರ ನೆರವಿಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ADVERTISEMENT

ಶ್ರೀನಗರದ ಗಲ್ಲಿಯೊಂದರಲ್ಲಿ ಚಪ್ಪಲಿ ಮಾರಾಟ ಮಾಡುವ ಶಮೀರ್‌ ಎಂಬುವರನ್ನು ಭೇಟಿ ಮಾಡಿ, ಒಂದು ಜೊತೆ ಚಪ್ಪಲಿ ಖರೀದಿಸಿ ಶೇ 20 ರಷ್ಟು ರಿಯಾಯ್ತಿ ಪಡೆದರು. ನೀವು ಕೂಡ ಇಲ್ಲಿಗೆ ಬಂದು ಚಪ್ಪಲಿ ಖರೀದಿಸಿ, ನನ್ನ ಹೆಸರು ಹೇಳಿ ಶೇ.20ರಷ್ಟು ರಿಯಾಯ್ತಿ ಪಡೆಯಿರಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡುವ ಮೂಲಕ ಹಾಸ್ಯ ಚಟಾಕಿ ಹಾರಿಸಿದರು.

ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಇದು ನಮ್ಮ ಚಪ್ಪಲಿ ಶೋರೂಂ, ಶೇ. 20ರಷ್ಟು ರಿಯಾಯಿತಿ ಪಡೆಯಿರಿ ಎಂದು ಬರೆದುಕೊಂಡಿದ್ದಾರೆ.

ಸ್ಥಳೀಯ ವ್ಯಾಪಾರಿಗಳ ಬಳಿ ಸರಕುಗಳನ್ನು ಕೊಂಡು ಅವರನ್ನು ನಾವು ಬೆಳೆಸಬೇಕು ಎಂದು ಸೋನು ಸೂದ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.