ಬಾಲಿವುಡ್ ನಟ ಸೋನು ಸೂದ್ ಅವರು ಹಾವು ರಕ್ಷಣೆ ಮಾಡಿದ್ದಾರೆ.
Credit: X/@SonuSood
ನವದೆಹಲಿ: ಬಾಲಿವುಡ್ ನಟ ಸೋನು ಸೂದ್ ಅವರು ಹಾವೊಂದನ್ನು ರಕ್ಷಣೆ ಮಾಡಿದ್ದು, ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಸೋನು ಸೂದ್ ಅವರು ಹಾವನ್ನು ಎಚ್ಚರಿಕೆಯಿಂದ ಚೀಲದೊಳಗೆ ಇರಿಸಿ, ತಾನು ಮತ್ತು ತನ್ನ ತಂಡವು ಅದನ್ನು ಸುರಕ್ಷಿತ ಪ್ರದೇಶದಲ್ಲಿ ಬಿಡುವುದಾಗಿ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಆದಾಗ್ಯೂ, ಅಭಿಮಾನಿಗಳು ಅದನ್ನು ಸ್ವಂತವಾಗಿ ಪ್ರಯತ್ನಿಸದಂತೆ ಸಲಹೆ ನೀಡಿದ್ದಾರೆ. ಸೋನು ಈ ಪೋಸ್ಟ್‌ಗೆ ‘ಹರ್ ಹರ್ ಮಹಾದೇವ್’ ಎಂದು ಶೀರ್ಷಿಕೆ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಭಿಮಾನಿಗಳು, ‘ರಿಯಲ್ ಹೀರೊ’, ‘ಹರ್ ಹರ್ ಮಹಾದೇವ್’, ‘ಗಾಡ್ ಬ್ಲೆಸ್ ಯು ಬ್ರೋ’ ಎಂಬಿತ್ಯಾದಿ ಕಾಮೆಂಟ್‌ಗಳನ್ನು ಮಾಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬಂದರೆ, ಸೋನು ಸೂದ್ ಕೊನೆಯ ಬಾರಿಗೆ ‘ಫತೇಹ್’ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಅವರೇ ಬರೆದು ನಿರ್ದೇಶಿಸಿದ ಆಕ್ಷನ್ ಥ್ರಿಲ್ಲರ್ ಚಿತ್ರ. ಇದರಲ್ಲಿ ನಾಸಿರುದ್ದೀನ್ ಶಾ, ಜಾಕ್ವೆಲಿನ್ ಫರ್ನಾಂಡಿಸ್, ವಿಜಯ್ ರಾಝ್ ಮತ್ತು ದಿಬ್ಯೇಂದು ಭಟ್ಟಾಚಾರ್ಯ ಕೂಡ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.