ADVERTISEMENT

ಕನ್ನಡಕ್ಕೂ ಬರಲಿದೆ ಕ್ಯಾ.ಗೋಪಿನಾಥ್‌ ಜೀವನಾಧರಿತ ತಮಿಳು ಸಿನಿಮಾ 'ಸೂರರೈ ಪೊಟ್ರು‘

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 11:46 IST
Last Updated 5 ಫೆಬ್ರುವರಿ 2020, 11:46 IST
   

ಚೆನ್ನೈ: ಕನ್ನಡಿಗ ಕ್ಯಾ. ಗೋಪಿನಾಥ್‌ ಜೀವನಾಧರಿತ 'ಸೂರರೈ ಪೊಟ್ರು' ತಮಿಳು ಸಿನಿಮಾ ನಿರ್ಮಾಣವಾಗುತ್ತಿದ್ದು ಈ ಸಿನಿಮಾ ಕನ್ನಡದಲ್ಲೂ ಬರಲಿದೆ ಎಂದು ಚಿತ್ರತಂಡ ಹೇಳಿದೆ.

ಖ್ಯಾತ ನಟ ಸೂರ್ಯಕ್ಯಾ. ಗೋಪಿನಾಥ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರವನ್ನು ಸುಧಾ ಕೊಂಗಾರ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಪೋಸ್ಟರ್‌ ಮತ್ತು ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.

ಕನ್ನಡಿಗ ಕ್ಯಾ. ಗೋಪಿನಾಥ್‌ ಅವರು ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ನಂತರ ವಿಮಾನಯಾನ ಸಂಸ್ಥೆ ಆರಂಭಿಸುವ ಮೂಲಕಹಲವರಿಗೆ ಸ್ಫೂರ್ತಿಯಾಗುತ್ತಾರೆ. ಯುವಜನರಲ್ಲಿ ಸ್ಪೂರ್ತಿ ತುಂಬುವ ಸಲುವಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿದೆ.

ADVERTISEMENT

ಈ ಸಿನಿಮಾ ಕನ್ನಡಕ್ಕೂ ಡಬ್‌ ಆಗಲಿದೆ ಎಂದು'ಸೂರರೈ ಪೊಟ್ರು‘ ಸಿನಿಮಾ ನಿರ್ಮಾಣ ಸಂಸ್ಥೆಟ್ವೀಟ್‌ ಮಾಡಿದೆ.

ಅಪರ್ಣಾ ಬಾಲಮುರಳಿ, ಮೋಹನ್‌ ಬಾಬು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಜಿ.ವಿ.ಪ್ರಕಾಶ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.