ADVERTISEMENT

ಚಂದನ್‌ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ಸೂತ್ರಧಾರಿ ಟ್ರೇಲರ್‌ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಏಪ್ರಿಲ್ 2025, 10:33 IST
Last Updated 28 ಏಪ್ರಿಲ್ 2025, 10:33 IST
ಧ್ರುವ ಸರ್ಜಾ, ಚಂದನ್‌, ಅಪೂರ್ವ 
ಧ್ರುವ ಸರ್ಜಾ, ಚಂದನ್‌, ಅಪೂರ್ವ    

ಬೆಂಗಳೂರು: ಗಾಯಕ ಚಂದನ್‌ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ‘ಸೂತ್ರಧಾರಿ’ ಮೇ 9ರಂದು ತೆರೆಕಾಣುತ್ತಿದ್ದು, ಚಿತ್ರದ ಟ್ರೇಲರ್‌ ಇತ್ತೀಚೆಗೆ ಬಿಡುಗಡೆಯಾಯಿತು. 

ನಟ ಧ್ರುವ ಸರ್ಜಾ ಟ್ರೇಲರ್‌ ಬಿಡುಗಡೆಗೊಳಿಸಿದರು. ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್‌ ಈ ಸಿನಿಮಾ ನಿರ್ಮಾಣ‌ ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದಾರೆ. ‘ನನ್ನ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಸರ್ಜಾ‌ ಕುಟುಂಬ. ಈ ಸಂದರ್ಭದಲ್ಲಿ ನನಗೆ ಧ್ರುವ ಅವರ ಮೊದಲ ಚಿತ್ರ ‘ಅದ್ದೂರಿ’ಯ ಬಿಡುಗಡೆ ದಿನದ ನೆನಪಾಗುತ್ತಿದೆ. ಬಿಡುಗಡೆಯ ಹಿಂದಿನ ದಿನ ಬೆಳಗ್ಗಿನ ಜಾವದವರೆಗೂ ನಾನು, ಧ್ರುವ ಚಿತ್ರಮಂದಿರಗಳಿಗೆ ಹೋಗಿ ಪೋಸ್ಟರ್‌ ಅಂಟಿಸಿದ್ದೆವು. ಮೊದಲ ಶೋ ಮುಗಿದ ಬೆನ್ನಲ್ಲೇ ನನ್ನ ಸ್ನೇಹಿತ ಆಗಿದ್ದ ಧ್ರುವ ಸ್ಟಾರ್‌ ಆಗಿದ್ದರು. ಅದು ಧ್ರುವ ಅವರ ಜೀವನ ಬದಲಾದ ದಿನ. ಆ ದಿನಗಳು ಕಣ್ಣಿಗೆ ಕಟ್ಟಿದಂತಿದೆ. ‘ಸೂತ್ರಧಾರಿ’ಯಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇನೆ’ ಎಂದರು ಚಂದನ್‌ ಶೆಟ್ಟಿ. 

ಚಿತ್ರದಲ್ಲಿ ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ. ಸಂಜಯ್ ಗೌಡ, ‘ನಟನ’ ಪ್ರಶಾಂತ್, ಲೋಹಿತ್, ರಮೇಶ್ ಮಾಸ್ಟರ್, ಗಣೇಶ್ ನಾರಾಯಣ್ ತಾರಾಬಳಗದಲ್ಲಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.