ADVERTISEMENT

ವಿಶಾಗನ್ ವರಿಸಿದ ಸೌಂದರ್ಯ ರಜನಿಕಾಂತ್‌

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2019, 3:51 IST
Last Updated 12 ಫೆಬ್ರುವರಿ 2019, 3:51 IST
ಸೌಂದರ್ಯ ರಜನಿಕಾಂತ್ ಹಾಗೂ ವಿಶಾಗನ್‌ ಅವರಿಗೆ ಉಡುಗೊರೆ ನೀಡಿದ ಎಂಡಿಎಂಕೆ ಮುಖ್ಯಸ್ಥ ವೈಕೊ –ಪಿಟಿಐ ಚಿತ್ರ
ಸೌಂದರ್ಯ ರಜನಿಕಾಂತ್ ಹಾಗೂ ವಿಶಾಗನ್‌ ಅವರಿಗೆ ಉಡುಗೊರೆ ನೀಡಿದ ಎಂಡಿಎಂಕೆ ಮುಖ್ಯಸ್ಥ ವೈಕೊ –ಪಿಟಿಐ ಚಿತ್ರ   

ಚೆನ್ನೈ:ಸೂಪರ್‌ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ಮತ್ತು ನಟ, ಉದ್ಯಮಿ ವಿಶಾಗನ್‌ ಅವರ ವಿವಾಹ ಚೆನ್ನೈನ ಐಷರಾಮಿ ಹೋಟೆಲ್‌ನಲ್ಲಿ ಸೋಮವಾರ ನೆರವೇರಿತು.

ಮುಖ್ಯಮಂತ್ರಿ ಕೆ. ಪಳನಿಸ್ವಾಮಿ, ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್‌, ಹಿರಿಯ ನಟ ಕಮಲ್‌ಹಾಸನ್‌ ಸೇರಿದಂತೆ ಅನೇಕ ಗಣ್ಯರು ನವದಂಪತಿಗೆ ಶುಭಹಾರೈಸಿದರು.

ಉದ್ಯಮಿ ಅಶ್ವಿನ್ ಎಂಬುವರನ್ನು ಪ್ರೀತಿಸಿದ್ದ ಸೌಂದರ್ಯ, 2010ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಅಶ್ವಿನ್ ಜೊತೆಗೆ ಏಳು ವರ್ಷಗಳ ಕಾಲ ಜೀವನ ನಡೆಸಿದ್ದ ಅವರು, ಕಳೆದ ವರ್ಷವಷ್ಟೇ ವಿಚ್ಛೇದನ ಪಡೆದು ದೂರವಾಗಿದ್ದರು. ಅವರಿಗೆ ಐದು ವರ್ಷದ ಮಗ ವೇದ್ ಸಹ ಇದ್ದಾನೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.