ADVERTISEMENT

ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿದ ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 8:33 IST
Last Updated 26 ಜೂನ್ 2021, 8:33 IST
ಕಾರ್ತಿಕಾ
ಕಾರ್ತಿಕಾ   

ದಕ್ಷಿಣ ಭಾರತದ ಖ್ಯಾತ ನಟಿ ಕಾರ್ತಿಕಾ ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿದ್ದು ಹೊಟೇಲ್ ಉದ್ಯಮದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.

ದರ್ಶನ್‌ ಅಭಿನಯದ ‘ಬೃಂಧಾವನ‘ ಸಿನಿಮಾದಲ್ಲಿನಟಿ ಕಾರ್ತಿಕಾ ನಟಿಸಿದ್ದರು. ಇತ್ತೀಚೆಗೆ ಅವಕಶಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಅವರು ಸಿನಿಮಾ ಬದುಕಿಗೆ ಗುಡ್‌ಬೈ ಹೇಳುವುದಾಗಿ ಘೋಷಣೆ ಮಾಡಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.

2016ರಲ್ಲಿ ಕಾರ್ತಿಕಾ ತಮಿಳಿನ ‌‘ವಾ ದಿಲ್‌‘ ಸಿನಿಮಾದಲ್ಲಿ ನಟಿಸಿದ್ದರು. ನಂತರ ಇಲ್ಲಿಯವರೆಗೂ ಅವರು ಯಾವುದೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಸ್ವಂತ ಹೊಟೇಲ್‌ ಹೊಂದಿರುವ ಕಾರ್ತಿಕಾ ಅವರು ಅದೇ ಉದ್ಯಮದಲ್ಲಿ ಮುಂದುವರೆಯುವುದಾಗಿ ಹೇಳಿದ್ದಾರೆ.

ADVERTISEMENT

ಕಾರ್ತಿಕಾ ಅವರಿಗೆ ತೆಲುಗಿನ ಜೋಷ್‌, ತಮಿಳಿನ ಕೋ ಹಾಗೂ ಮಲಯಾಳಂನ ಮಕರಮಂಜು ಚಿತ್ರಗಳು ಜನಪ್ರಿಯತೆ ತಂದುಕೊಟ್ಟಿದ್ದವು. ಕಾರ್ತಿಕಾ, ತಮಿಳಿನ ಖ್ಯಾತ ಹಿರಿಯ ನಟಿ ರಾಧಿಕ ಅವರ ಪುತ್ರಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.