ನಟಿ ಶ್ರೀಲೀಲಾ
ಇನ್‌ಸ್ಟಾಗ್ರಾಮ್
ಬೆಂಗಳೂರು: ಪುಷ್ಪ 2 ನಲ್ಲಿಯ ಕಿಸಕ್‌ನೆ ಹಾಡಿನ ಮೂಲಕ ದೇಶದ ಸಿನಿ ಪ್ರಿಯರಿಂದ ಜನಪ್ರಿಯತೆ ಪಡೆದ ನಟಿ ಶ್ರೀಲೀಲಾ ಸದ್ಯ ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿ. ‘ಆಶಿಕಿ–3’ ನಲ್ಲಿ ಕಾರ್ತಿಕ್ ಆರ್ಯನ್‌ಗೆ ನಾಯಕಿಯಾಗಿರುವ ಈಕೆ ಬಾಲಿವುಡ್‌ನಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಇದೀಗ ಲವರ್ ಬಾಯ್ ಸಿದ್ಧಾರ್ಥ್ ಮಲ್ಹೋತ್ರಾ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ.
ಈ ಹಿಂದೆ ‘ಡ್ರೀಮ್ ಗರ್ಲ್’ ಎಂಬ ಸಿನಿಮಾ ನಿರ್ದೇಶನದ ಮಾಡಿದ್ದ ರಾಜ್ ಶಾಂಡಿಲ್ಯ ಅವರು ಸಿದ್ಧಾರ್ಥ್ ಮಲ್ಹೋತ್ರಾಗೆ ಆ್ಯಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ.
ಕಮರ್ಷಿಯಲ್ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಈ ಸಂಬಂಧ ಶ್ರೀಲೀಲಾ ಜೊತೆ ಚಿತ್ರತಂಡ ಮಾತುಕತೆ ನಡೆಸಿದೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.
ಮಹಾವೀರ್ ಜೈನ್ ಫಿಲ್ಮ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಈ ವರ್ಷ ಸೆಪ್ಟೆಂಬರ್‌ನಿಂದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ‘ಲೈಗರ್’ ಖ್ಯಾತಿಯ ನಟಿ ಅನನ್ಯಾ ಪಾಂಡೆ ಜೊತೆ ಕೂಡ ತಂಡ ಮಾತುಕತೆ ನಡೆಸಿದೆ ಎನ್ನಲಾಗಿದೆ. ಪಾಂಡೆ ಇತ್ತೀಚೆಗೆ ತೆರೆಕಂಡ ಅಕ್ಷಯ್ ಕುಮಾರ್ ನಟನೆಯ ‘ಕೇಸರಿ–2’ ನಲ್ಲಿ ಕಾಣಿಸಿಕೊಂಡಿದ್ದರು.
ಶ್ರೀಲೀಲಾ ಸುಧಾ ಕೊಂಗ್ರಾ ಅವರ ತಮಿಳು ಚಿತ್ರ ‘ಪರಶಕ್ತಿ’ಯಲ್ಲಿಯೂ ಕಾಣಿಸಿಕೊಂಡಿದ್ದಾರೆ. ‘ಪುಪ್ಪ–2’ ಚಿತ್ರದಲ್ಲಿ ನಟಿಸಿದ್ದು ಮಾರುಕಟ್ಟೆಯಲ್ಲಿ ಇವರ ಬೇಡಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.