
ನಟಿ ಶ್ರೀಲಿಲಾ
ಚಿತ್ರ: ಇನ್‌ಸ್ಟಾಗ್ರಾಂ
ಇತ್ತೀಚೆಗೆ ಸಾಮಾಜಿಕ ಮಧ್ಯಮದಲ್ಲಿ ಎಐ ತಂತ್ರಜ್ಞಾನ ಬಳಸಿಕೊಂಡು ನಟ, ನಟಿಯರ ಫೋಟೊಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ಇದೀಗ ಕನ್ನಡದ ನಟಿ ಶ್ರೀಲೀಲಾ ಅವರು ಎಐ ದುರ್ಬಳಕೆ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಟಿ ಶ್ರೀಲೀಲಾ ಪೋಸ್ಟ್
‘ನಾನು ಕೈಮುಗಿದು ಪ್ರತಿಯೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರನ್ನೂ ವಿನಂತಿಸುತ್ತೇನೆ. ಎಐ ತಂತ್ರಜ್ಞಾನದ ದುರ್ಬಳಕೆಯನ್ನು ಬೆಂಬಲಿಸಬೇಡಿ. ಎಐ ತಂತ್ರಜ್ಞಾನದ ಸರಿಯಾದ ಬಳಕೆ ಮತ್ತು ಅದನ್ನು ದುರ್ಬಳಕೆ ಮಾಡಿಕೊಳ್ಳುವುದರ ನಡುವೆ ವ್ಯತ್ಯಾಸವಿದೆ. ತಂತ್ರಜ್ಞಾನದಲ್ಲಿ ಅಪ್‌ಡೇಟ್ ಆಗುವುದು ಜೀವನವನ್ನು ಸರಳಗೊಳಿಸುವ ಉದ್ದೇಶದಿಂದ. ಎಐ ನಮ್ಮ ಜೀವನವನ್ನು ಸುಗಮಗೊಳಿಸಬೇಕೆ ಹೊರತು ಕಷ್ಟ ನೀಡಲು ಅಲ್ಲ ಎನ್ನುವುದು ನನ್ನ ಅಭಿಪ್ರಾಯ’ ಎಂದಿದ್ದಾರೆ.
‘ಪ್ರತಿಯೊಬ್ಬ ಮಹಿಳೆ, ಮಗಳು, ಮೊಮ್ಮಗಳು, ಸಹೋದರಿ, ಸ್ನೇಹಿತೆ ಅಥವಾ ಸಹೋದ್ಯೋಗಿ ಇರುತ್ತಾಳೆ, ಅವಳು ಕಲೆಯನ್ನು ತನ್ನ ವೃತ್ತಿಗಳಲ್ಲಿ ಒಂದಾಗಿ ಆರಿಸಿಕೊಂಡರೂ ಸಹ ಅವಳೂ ಓರ್ವ ಹುಡುಗಿಯೇ ಆಗಿರುತ್ತಾಳೆ. ನಾವು ಸುರಕ್ಷಿತ ವಾತಾವರಣದಲ್ಲಿದ್ದೇವೆ ಎಂಬ ವಿಶ್ವಾಸದೊಂದಿಗೆ ಸಂತೋಷವನ್ನು ಹರಡುವ ಉದ್ಯಮದ ಭಾಗವಾಗಲು ಬಯಸುತ್ತೇವೆ’ ಎಂದಿದ್ದಾರೆ.
‘ನಾನು ಪ್ರತೀ ವಿಚಾರವನ್ನು ಚಿಕ್ಕದಾಗಿಯೇ ತೆಗೆದುಕೊಳ್ಳುತ್ತೇನೆ ಮತ್ತು ನಾನು ನನ್ನದೇಯಾದ ಪ್ರಪಂಚದಲ್ಲಿ ಬದುಕುತ್ತಿದ್ದೇನೆ. ಆದರೆ ಇದೊಂದು ವಿಚಾರ ನನಗೆ ತುಂಬಾ ತೊಂದರೆಯನ್ನು ಉಂಟು ಮಾಡಿದೆ. ನನ್ನ ಸಹೋದ್ಯೋಗಿಗಳು ಸಹ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಮತ್ತು ಎಲ್ಲರ ಪರವಾಗಿ ನಾನು ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅತ್ಯಂತ ಸೌಜನ್ಯ ಮತ್ತು ಘನತೆಯಿಂದ ಕೇಳಿಕೊಳ್ಳುತ್ತೇನೆ, ದಯವಿಟ್ಟು ನಮ್ಮೊಂದಿಗೆ ನಿಲ್ಲಿ ಎಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇದರಿಂದ ಆಚೆಗೆ ಅಧಿಕಾರಿಗಳು ಗಮನಿಸಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.