ಆರ್ಆರ್ಆರ್ ಸಿನಿಮಾದ ಜೂನಿಯರ್ ಎನ್ಟಿಆರ್ ಪಾತ್ರದ ಪರಿಚಯಕ್ಕಾಗಿ ಇತ್ತೀಚೆಗೆ ಟೀಸರ್ ಒಂದನ್ನು ಬಿಡುಗಡೆ ಮಾಡಿದ್ದರು ನಿರ್ದೇಶಕ ರಾಜಮೌಳಿ. ಟೀಸರ್ನಲ್ಲಿ ಜೂನಿಯರ್ಎನ್ಟಿಆರ್ ಧರಿಸಿದ್ದ ‘ಸ್ಕಲ್ ಕ್ಯಾಪ್’ (ಮುಸ್ಲಿಮರು ಧರಿಸುವ ಸಾಂಪ್ರದಾಯಿಕ ಟೋಪಿ) ವಿವಾದಕ್ಕೆ ಕಾರಣವಾಗಿದೆ.
ಬಿಜೆಪಿ ನಾಯಕರೊಬ್ಬರಿಂದ ಈ ವಿಷಯಕ್ಕೆ ಸಂಬಂಧಿಸಿ ಬೆದರಿಕೆಯ ಸಂದೇಶಗಳು ಬಂದಿವೆ ಎನ್ನಲಾಗುತ್ತಿದೆ.
ಇನ್ನೂ ಸಿನಿಮಾದ ಶೂಟಿಂಗ್ ಕೆಲಸಗಳು ಪೂರ್ತಿಯಾಗಿಲ್ಲ. ಆದರೆ ಎನ್ಟಿಆರ್ ಪಾತ್ರದ ಪರಿಚಯಕ್ಕಾಗಿ ಬಿಡುಗಡೆ ಮಾಡಿದ್ದ ಟೀಸರ್ನಲ್ಲಿ ಕೋಮರಾಮ್ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್ ಸ್ಕಲ್ ಕ್ಯಾಪ್ಧರಿಸಿದ್ದರು.
ಈ ಹಿಂದೆ ‘ಪದ್ಮಾವತಿ’ ಚಿತ್ರದ ಶೀರ್ಷಿಕೆಗೆ ಸಂಬಂಧಿಸಿ ಸಂಜಯ್ ಲೀಲಾ ಬನ್ಸಾಲಿ ಕೂಡ ಇಂತಹದ್ದೇ ಪರಿಸ್ಥಿತಿಯನ್ನು ಎದುರಿಸಿದ್ದರು. ಯಶಸ್ವಿ ನಿರ್ದೇಶಕ ರಾಜಮೌಳಿ ಇಂತಹ ದೃಶ್ಯ, ಶೀರ್ಷಿಕೆ ಹಾಗೂ ಸಂಭಾಷಣೆಗಳಿಂದಾಗುವ ವಿವಾದಗಳನ್ನು ಚೆನ್ನಾಗಿ ಬಲ್ಲರಾಗಿದ್ದಾರೆ. ಹಾಗಾಗಿ ಈ ಟೀಸರ್ಸಂಬಂಧಿಸಿ ತಮ್ಮ ಆಪ್ತರ ಬಳಿ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಆರ್ಆರ್ಆರ್ ಸಿನಿಮಾವು ಸ್ವಾತಂತ್ರ್ಯ ಹೋರಾಟಗಾರರಾದ ಕೋಮರಾಮ್ ಭೀಮ್ ಹಾಗೂ ಅಲ್ಲೂರಿಸೀತಾರಾಮ ರಾಜು ಅವರ ನಡುವಿನ ಸ್ನೇಹದ ಕಥೆಯನ್ನು ಹೊಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.