ADVERTISEMENT

ಸಂಕ್ರಾಂತಿಗೆ ತಲಾ ವರ್ಸಸ್‌ ತಲೈವಾ

ಪೊಂಗಲ್‌ ದಿನ ತೆರೆಗೆ ಬರಲಿವೆ ಪೆಟ್ಟಾ, ವಿಶ್ವಾಸಂ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 12:24 IST
Last Updated 1 ಜನವರಿ 2019, 12:24 IST
   

ತೆರೆಯ ಮೇಲೆ ತಮ್ಮದೇ ಆದ ಸ್ಟೈಲ್‌, ಮ್ಯಾನರಿಸಂ ಹಾಗೂ ಅಚ್ಚುಕಟ್ಟು ಅಭಿನಯದ ಮೂಲಕ ಕಮಾಲ್‌ ಮಾಡುವ ಈ ನಟರ ಚಿತ್ರಗಳ ಬಗ್ಗೆ ಸಿನಿಪ್ರಿಯರ ನಿರೀಕ್ಷೆ ತುಸು ಹೆಚ್ಚಾಗಿಯೇ ಇರುತ್ತದೆ. ಹೀಗಾಗಿ ಹಬ್ಬದ ದಿನಗಳಲ್ಲಿ ಸಿನಿಮಾ ಬಿಡುಗಡೆಯಾಗುವುದು ಸಾಮಾನ್ಯ ಸಂಗತಿಯಾದರೂ, ಈ ಬಾರಿಯ ಪೊಂಗಲ್‌ ತಮಿಳುನಾಡಿಗೆ ವಿಶೇಷ. ಅಜಿತ್ ಅಭಿನಯದ ವಿಶ್ವಾಸಂ ಮತ್ತು ರಜನಿಕಾಂತ್ ಅಭಿನಯದ ಪೆಟ್ಟಾ ಸಂಕ್ರಾಂತಿಯ ಸಂಭ್ರಮದೊಂದಿಗೆ ತೆರೆಗೆ ಬರಲಿದೆ.

ನಿರ್ದೇಶಕ ಶಿವಾ– ನಾಯಕ ನಟ ಅಜಿತ್‌ ಜೋಡಿಯ ನಾಲ್ಕನೇ ಸಿನಿಮಾ ವಿಶ್ವಾಸಂ. ಅಜಿತ್‌ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಂಡಿದ್ದಾರೆ. ಗ್ರಾಮೀಣ ಸೊಗಡಿನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ರಿಯಲ್‌ಎಸ್ಟೇಟ್‌ ಮಸಾಲೆ ಬೆರಸಿರುವುದು ಟ್ರೇಲರ್‌ನಲ್ಲಿ ಎದ್ದು ಕಾಣುತ್ತದೆ.ಪೆಟ್ಟಾಸಿನಿಮಾದಲ್ಲಿ ರಜನಿ ವಯಸ್ಸಿಗೆ ಮೀರಿದ ಪಾತ್ರ ಪೋಷಣೆ ಮಾಡಿದ್ದಾರೆ.ಮಧ್ಯವಯಸ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸೂಪರ್‌ಸ್ಟಾರ್‌, ತಮ್ಮ ಹಿಂದಿನ ಚಿತ್ರಗಳ ಹೊಡಿಬಡಿ ಆಟವನ್ನು ಇಲ್ಲೂ ಮುಂದುವರಿಸಿದ್ದಾರೆ.

ಪೆಟ್ಟಾ ಟ್ರೇಲರ್ ಗಮನಿಸಿದರೆ, ಈ ಚಿತ್ರವೂ ತುಪಾಕಿಗಳ ನಡುವೆ ಸುತ್ತುವ ಗ್ಯಾಂಗ್‌ಸ್ಟರ್ ಕಥೆಯಂತೆ ಭಾಸವಾಗುತ್ತದೆ.ಕಾರ್ತಿಕ್‌ ಸುಬ್ಬರಾವ್‌ ನಿರ್ದೇಶನವಿರುವ ಈ ಸಿನಿಮಾದಲ್ಲಿ ರಜನಿಗೆ ನಾಯಕಿಯಾಗಿ ಸಿಮ್ರಾನ್‌ ಕಾಣಿಸಿಕೊಂಡಿದ್ದು,ಬಾಲಿವುಡ್‌ನ ಖ್ಯಾತ ನಟ ನವಾಜುದ್ದೀನ್‌ ಸಿದ್ದಿಕಿ ಹಾಗೂ ಪ್ರತಿಭಾವಂತ ನಟ ವಿಜಯ್ ಸೇತುಪತಿ ಕಾಣಿಸಿಕೊಂಡಿದ್ದಾರೆ.

ADVERTISEMENT

ಈ ಎರಡೂ ಚಿತ್ರಗಳಲ್ಲಿ ಮಾಸ್‌ ಅಭಿಮಾನಿಗಳನ್ನು ರಂಜಿಸುವ ಸಂಭಾಷಣೆಗಳಿದ್ದು, ಪೈಸಾ ವಸೂಲಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.ಅಂದಹಾಗೆ ವಿಶ್ವಾಸಂ ಸಿನಿಮಾವನ್ನುಜನವರಿ ಎರಡನೇ ವಾರಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಪೆಟ್ಟಾ ಚಿತ್ರವೂಅದೇ ವಾರರಿಲೀಸ್‌ ಆಗಲಿರುವುದರಿಂದ ಕಾಲಿವುಡ್‌ನಲ್ಲಿ ಸ್ಟಾರ್‌ವಾರ್‌ ಶುರುವಾಗಿದೆ.

ತಮ್ಮ ನೆಚ್ಚಿನ ನಟರ ಸಿನಿಮಾ ಪೋಸ್ಟರ್‌ಗಳನ್ನುಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮ ಆಚರಿಸಿರುವ ಅಭಿಮಾನಿಗಳು, ಪರಸ್ಪರ ಕಾಲೆಳೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.