ADVERTISEMENT

ಅರಶಿನ ಶಾಸ್ತ್ರದ ಫೋಟೊ ಹಂಚಿಕೊಂಡ ಕತ್ರೀನಾ–ವಿಕ್ಕಿ: ಖ್ಯಾತ ನಟಿಯರಿಂದ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಡಿಸೆಂಬರ್ 2021, 10:40 IST
Last Updated 11 ಡಿಸೆಂಬರ್ 2021, 10:40 IST
ಕತ್ರೀನಾ ಮತ್ತು ವಿಕ್ಕಿ– ಇನ್‌ಸ್ಟಾಗ್ರಾಮ್‌ ಚಿತ್ರ
ಕತ್ರೀನಾ ಮತ್ತು ವಿಕ್ಕಿ– ಇನ್‌ಸ್ಟಾಗ್ರಾಮ್‌ ಚಿತ್ರ   

ಬಾಲಿವುಡ್‌ ತಾರೆಗಳಾದ ಕತ್ರೀನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಅವರು ಗುರುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕತ್ರೀನಾ–ವಿಕ್ಕಿ ಅವರ ಖಾಸಗಿಮದುವೆಸಮಾರಂಭದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿವೆ.

ಅರಶಿನ ಶಾಸ್ತ್ರದ ಫೋಟೊಗಳನ್ನು ಕತ್ರೀನಾ ಮತ್ತು ವಿಕ್ಕಿ ಇನ್‌ಸ್ಟಾಗ್ರಾಮ್‌ ಖಾತೆಗಳಲ್ಲಿಇಂದು (ಶನಿವಾರ) ಹಂಚಿಕೊಂಡಿದ್ದಾರೆ.

ADVERTISEMENT

ಕತ್ರೀನಾ ಹಂಚಿಕೊಂಡಿರುವ ಫೋಟೊಗಳಿಗೆಭಾರತೀಯ ಚಿತ್ರರಂಗದ ಖ್ಯಾತ ನಟಿಯರಾದ ಆಲಿಯಾ ಭಟ್‌, ಅನುಷ್ಕಾ ಶರ್ಮಾ, ರಶ್ಮಿಕಾ ಮಂದಣ್ಣ, ವಾಣಿ ಕಪೂರ್‌ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.