ADVERTISEMENT

4 ಸಾವಿರ ಥಿಯೇಟರ್‌ಗೆ 'ಪೈಲ್ವಾನ್' ಲಗ್ಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 15:43 IST
Last Updated 10 ಸೆಪ್ಟೆಂಬರ್ 2019, 15:43 IST
ಪೈಲ್ವಾನ್
ಪೈಲ್ವಾನ್   

ಬೆಂಗಳೂರು: ಕೃಷ್ಣ ನಿರ್ದೇಶನದ ನಟ ಸುದೀಪ್ ನಟನೆಯ ಬಹುನಿರೀಕ್ಷಿತ ಪೈಲ್ವಾನ್ ಸಿನಿಮಾ ಸೆಪ್ಟೆಂಬರ್ 12ರಂದು 4 ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.

ಸೆ. 12ರಂದು ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಏಕಕಾಲಕ್ಕೆ ಅಮೆರಿಕ, ಯುಕೆ, ಯುರೋಪ್, ಯುಎಇಯಲ್ಲಿಯೂ ಬಿಡುಗಡೆ ಕಾಣುತ್ತಿದೆ. ರಷ್ಯಾದಲ್ಲಿಯೂ ಬಿಡುಗಡೆಗೆ ಸಿದ್ಧತೆ ನಡೆದಿದೆ.

ಸೆ.13ರಿಂದ ಹಿಂದಿಯಲ್ಲಿ 2,400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿರುವುದು ವಿಶೇಷ.
ನಟ ಸುದೀಪ್ ಮಾತನಾಡಿ, ನಾನು ಹೈದರಾಬಾದ್ ಮತ್ತು ಚೆನ್ನೈಗೆ ಹೋಗಿದ್ದೇನೆ. ಎಲ್ಲರೂ ಉತ್ತಮವಾಗಿ ಸ್ವೀಕರಿಸುತ್ತಾರೆ. ಭಾಷೆಗಳ ನಡುವೆ ಇದ್ದ ಗೋಡೆಗಳು ಬಿದ್ದು ಹೋಗಿವೆ. ಎಲ್ಲರೂ ಗೌರವ ನೀಡುತ್ತಾರೆ. ಅವರು ಇಲ್ಲಿಗೆ ಬಂದಾಗಲೂ ನಾವು ಅಷ್ಟೇ ಗೌರವ, ಪ್ರೀತಿ ‌ನೀಡಬೇಕು ಎಂದು ಹೇಳಿದರು.

ADVERTISEMENT

ಪರಸ್ಪರ ಗೌರವ ಇದ್ದಾಗ ಯಾವುದೇ ತೊಂದರೆ‌ ಇರುವುದಿಲ್ಲ. ಹಾಗಾಗಿ, ಬಾಲಿವುಡ್ ನಟ ಸುನಿಲ್ ಶೆಟ್ಟಿ ಅವರು ಪೈಲ್ವಾನ್ ನಲ್ಲಿ ‌‌ನಟಿಸಲು ಕಷ್ಟವಾಗಲಿಲ್ಲ. ಅವರು ಉತ್ಸಾಹದಿಂದಲೇ ಪಾಲ್ಗೊಂಡಿದ್ದಾರೆ ಎಂದರು.

ಕನ್ನಡ, ಹಿಂದಿ, ತೆಲುಗು‌‌ ಮತ್ತು ತಮಿಳಿನಲ್ಲಿ ಡಬ್ಬಿಂಗ್ ಮಾಡಿರುವೆ. ಆದರೆ, ಮಲಯಾಳದಲ್ಲಿ ಡಬ್ಬಿಂಗ್ ಮಾಡಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಹೇಳಿದರು.

'ನಾನು ಪುಸ್ತಕ ಓದುವುದಿಲ್ಲ. ಆದರೆ, ನನ್ನ ಹೆಸರಿನಲ್ಲಿ ಗ್ರಂಥಾಲಯ ಸ್ಥಾಪಿಸಿರುವುದು‌ ಖುಷಿಯ ವಿಚಾರ. ಪುಸ್ತಕ ಓದುವವರಿಗೆ ಒಳ್ಳೆಯದಾಗಲಿ' ಎಂದು ಶುಭ ಕೋರಿದರು.

ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಹಿಂದಿಯ ದಬಾಂಗ್ 3ನಲ್ಲಿ ನಾನು‌ ನಟಿಸುತ್ತಿರುತ್ತಿವೆ. ಪೈಲ್ವಾನ್ ಸಿನಿಮಾವನ್ನು ನಾನು ನೋಡಬೇಕೆಂದು ಸಲ್ಲು ಅವರೇ ಕೇಳಿದ್ದಾರೆ. ನಾಳೆ ಅವರ‌ ಕುಟುಂಬ ಸಿನಿಮಾವನ್ನು‌ ನೋಡಲಿದೆ ಎಂದು ಮಾಹಿತಿ ನೀಡಿದರು.

ನಾನು ಜೀವನದಲ್ಲಿ ಏನನ್ನು ಕಳೆದುಕೊಂಡಿಲ್ಲ. ಸಾಕಷ್ಟು ಗಳಿಸಿದ್ದೇನೆ ಎಂದರು.

ನಟ ರವಿಚಂದ್ರನ್ ಮಾತನಾಡಿ, ಪ್ರಸ್ತುತ ಕನ್ನಡ ಸಿನಿಮಾಗಳು ₹ 100 ಕೋಟಿ ಕ್ಲಬ್ ಸೇರುವ ಹಾದಿ ಸುಲಭವಾಗಿದೆ. ಇದು ಕನ್ನಡ ಇಂಡಸ್ಟ್ರಿಯ ಬೆಳವಣಿಗೆಗೆ ಸಹಕಾರಿಯಾಗಲಿದೆ. ಪೈಲ್ವಾನ್ ಕೂಡ ಕ್ಲಬ್ ಸೇರಲಿ ಎಂದು ಶುಭ ಕೋರಿದರು.

ನಿರ್ದೇಶಕ ಕೃಷ್ಣ ಮಾತನಾಡಿ, ಕುಸ್ತಿ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಕಾಣುವುದಿಲ್ಲ ಎಂಬ ಮಾತಿತ್ತು. ಪೈಲ್ವಾನ್ ಚಿತ್ರ ಇದನ್ನು ಸುಳ್ಳಾಗಿಸಿದೆ ಎಂದು ಹೇಳಿದರು‌.

ಪೈರಸಿ ತಡೆಗೂ ಸೂಕ್ತ ಕ್ರಮವಹಿಸಲಾಗಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಅಭಿಮಾನಿಗಳಿಗೆ ನಾಳೆ ಸುದೀಪ್‌ ಮೂಲಕ ಟ್ವೀಟ್ ಮಾಡಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.