
ಕಿರುತೆರೆ ನಟಿ ಸುಧಾ ಚಂದ್ರನ್
ಚಿತ್ರ: ಇನ್‌ಸ್ಟಾಗ್ರಾಂ
ಬಹುಭಾಷಾ ನಟಿ, ನೃತ್ಯಪಟು ಸುಧಾ ಚಂದ್ರನ್ ಅವರು ಮೈ ಮೇಲೆ ದೇವಿ ಆವೇಶ ಆದಂತೆ ವರ್ತಿಸಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನಿಜಕ್ಕೂ ಅವರಿಗೆ ಏನಾಯ್ತು ಎಂದು ವೀಕ್ಷಕರು ಗಾಬರಿಯಾಗಿದ್ದಾರೆ.
ಅಸಲಿಗೆ ನಟಿಗೆ ಆಗಿದ್ದೇನು?
ನಟಿ ಸುಧಾ ಚಂದ್ರನ್ ಅವರು ಮುಂಬೈನ ಭಜನಾ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಆ ವೇಳೆ ಏಕಾಏಕಿ ಮೈ ಮೇಲೆ ದೇವಿ ಆಹ್ವಾನ ಆದ ರೀತಿಯಲ್ಲೇ ವರ್ತಿಸಿದ ವಿಡಿಯೊ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅಲ್ಲಿದ್ದ ಜನರು ಅವರನ್ನು ಹಿಡಿದುಕೊಂಡು ಸಮಾಧಾನ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೆ ನಟಿ ಸುಧಾ ಅವರು ಅಕ್ಕಪಕ್ಕ ನಿಂತುಕೊಂಡಿದ್ದವರ ಮುಂದೆ ಕಿರುಚುತ್ತಿರುವುದು, ಕೈಗೆ ಕಚ್ಚುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ಈ ವಿಡಿಯೊ ನೋಡಿದ ಅನೇಕರು ನಟಿಗೆ ಏನಾಯ್ತು? ಈಗ ಹೇಗಿದ್ದಾರೆ? ಕಮೆಂಟ್ ಮಾಡುವ ಮೂಲಕ ಕಳವಳ ವ್ಯಕ್ತಪಡಿದ್ದಾರೆ.
ನಟಿ ಸುಧಾ ಚಂದ್ರನ್ ಖ್ಯಾತ ಭರತನಾಟ್ಯ ಕಲಾವಿದೆ. ‘ಕಹಿ ಕಿಸಿ ರೋಜ್’ ಧಾರಾವಾಹಿಯಲ್ಲಿ ರಮೋಲಾ ಸಿಕಂದ್ ಎಂಬ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದರು. ಇದಾದ ಬಳಿಕ 'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ', 'ನಾಗಿನ್' ಫ್ರಾಂಚೈಸಿ, 'ಕಲಿಯುಗ್ ಮೇ ಭಕ್ತಿ ಕಿ ಶಕ್ತಿ', 'ಮಾತಾ ಕಿ ಚೌಕಿ', 'ಯೇ ಹೈ ಮೊಹಬ್ಬತೇನ್' ಸೇರಿದಂತೆ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸುಧಾ ಅವರು ಬಾಲಿವುಡ್ ಸೇರಿದಂತೆ ಕೆಲ ಪ್ರಾದೇಶಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೇ ಒಲವಿನ ಆಸರೆ, ಬಿಸಿಲು ಬೆಳದಿಂಗಳು ಸೇರಿ ಕೆಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.