ADVERTISEMENT

ಗೆಳತಿಯರ ಜತೆ ಈಜುಕೊಳದಲ್ಲಿ ಪಾರ್ಟಿ ಮಾಡಿದ ಸುಹಾನಾ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮಾರ್ಚ್ 2022, 11:11 IST
Last Updated 9 ಮಾರ್ಚ್ 2022, 11:11 IST
   

ಬೆಂಗಳೂರು: ಬಾಲಿವುಡ್‌ನ ಮುಂದಿನ ಪೀಳಿಗೆ ಎಂದೇ ಗುರುತಿಸಲ್ಪಡುವ ಸುಹಾನಾ ಖಾನ್, ಅನನ್ಯಾ ಪಾಂಡೆ ಮತ್ತು ಶಾನಾಯ ಕಪೂರ್ ಅವರ ನಡುವಣ ಗೆಳೆತನ ಎಲ್ಲರಿಗೂ ತಿಳಿದಿದೆ.

ಪ್ರವಾಸ ಹೋಗುವುದು ಮತ್ತು ಹೊಸ ಹೋಟೆಲ್‌, ವಿಹಾರ, ವಾರಾಂತ್ಯದ ಪಾರ್ಟಿ.. ಹೀಗೆ ಎಲ್ಲ ಸಂದರ್ಭದಲ್ಲೂ ಇವರು ಜತೆಯಾಗಿರುತ್ತಾರೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಸುಹಾನಾ, ಅನನ್ಯಾ ಮತ್ತು ಶಾನಾಯ ಜತೆಯಾಗಿ ಪಾರ್ಟಿಯಲ್ಲಿ ಪಾಲ್ಗೊಂಡ ಸಂದರ್ಭದ ಫೋಟೊಗಳನ್ನು ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಎಲ್ಲಿ ಮಹಿಳೆ ಇರುತ್ತಾಳೆಯೋ.. ಅಲ್ಲಿ ಮ್ಯಾಜಿಕ್ ಇರುತ್ತದೆ ಎನ್ನುವ ಅಡಿಬರಹವನ್ನು ಅನನ್ಯಾ ಪಾಂಡೆ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ನೀಡಿದ್ದಾರೆ.

ಬಾಲ್ಯದಿಂದಲೂ ಸುಹಾನಾ, ಅನನ್ಯಾ ಮತ್ತು ಶಾನಾಯ ಗೆಳತಿಯರಾಗಿದ್ದು, ಚಿತ್ರರಂಗ ಪ್ರವೇಶಿಸಿದ ಬಳಿಕವೂ ಗೆಳೆತನ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.