ADVERTISEMENT

ನಟಿ ಸನ್ನಿ ಲಿಯೋನ್‌ ಕೈಯಲ್ಲಿ 7 ಸಿನಿಮಾಗಳು: ಇಲ್ಲಿದೆ ವಿವರ...

​ಪ್ರಜಾವಾಣಿ ವಾರ್ತೆ
Published 4 ಜನವರಿ 2022, 6:59 IST
Last Updated 4 ಜನವರಿ 2022, 6:59 IST
ಸನ್ನಿ ಲಿಯೋನ್‌
ಸನ್ನಿ ಲಿಯೋನ್‌   

ಮುಂಬೈ: ಬಾಲಿವುಡ್‌ ಮಾದಕ ನಟಿ ಸನ್ನಿ ಲಿಯೋನ್‌ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ7 ಸಿನಿಮಾಗಳು ಇದೇ ವರ್ಷದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ 7 ಸಿನಿಮಾಗಳು ನಿರ್ಮಾಣವಾಗಲಿವೆ. ತಮಿಳುನಲ್ಲಿ ಪಟ್ಟಾ, ಅನಾಮಿಕ, ತೆಲುಗಿನಲ್ಲಿ ’ವೀರಮ್ಮದೇವಿ’, ಮಲಯಾಳಂನಲ್ಲಿ ’ರಂಗೀಲಾ’ ಸಿನಿಮಾಗಳ ನಿರ್ಮಾಣವಾಗುತ್ತಿವೆ.

ಹಿಂದಿಯಲ್ಲಿ ಕೋಕಕೋಲಾ, ಹೆಲೆನ್‌, ಓ ಮೈ ಗೋಸ್ಟ್ ಸಿನಿಮಾಗಳು ತೆರೆಗೆ ಬರಲಿದ್ದು ಈ ಚಿತ್ರಗಳಲ್ಲಿ 2022ರಲ್ಲಿಯೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ADVERTISEMENT

2022ನೇ ವರ್ಷವನ್ನು ಗೋವಾದಲ್ಲಿ ಆಚರಿಸಿಕೊಳ್ಳುವ ಮೂಲಕ ಸನ್ನಿ ಲಿಯೋನ್‌ ಸುದ್ದಿಯಾಗಿದ್ದರು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಗೋವಾದಲ್ಲಿ ಸಂಭ್ರಮಿಸಿದ ಫೋಟೊಗಳನ್ನು ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.