ADVERTISEMENT

ತಲೈವಾ ರಜನಿಕಾಂತ್‌ಗೆ 69ನೇ ಜನ್ಮದಿನದ ಸಂಭ್ರಮ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 7:46 IST
Last Updated 12 ಡಿಸೆಂಬರ್ 2019, 7:46 IST
   

ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್, ಹಿರಿಯ ನಟ ರಜನಿಕಾಂತ್ ಇಂದು 69ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ದೇಶ ವಿದೇಶದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಪಡೆದಿರುವ ರಜನಿ, ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ.

ಅಭಿಮಾನಿಗಳ ಜತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಖುಷಿ ಒಂದೆಡೆಯಾದರೆ, ಅಭಿಮಾನಿಗಳಿಗೆ ತಮ್ಮೊಳಗಿನಅಭಿಮಾನವನ್ನು ವ್ಯಕ್ತಪಡಿಸುವ ಪುಳಕ. ಹಾಗಾಗಿ ರಜನಿ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಸಾವಿರಾರು ಚಿತ್ರಮಂದಿರಗಳಲ್ಲಿ ಅವರ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.ದೇವಾಲಯಗಳಲ್ಲಿ ರಜನಿ ಹೆಸರಿನಲ್ಲಿಅಭಿಮಾನಿಗಳು ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಕೆಲವು ಕಡೆ ಅನ್ನಸಂತರ್ಪಣೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿಅರ್ಥಪೂರ್ಣವಾಗಿ ರಜನಿ ಜನ್ಮದಿನ ಆಚರಿಸಲಾಗುತ್ತಿದೆ.

ADVERTISEMENT

ರಜನಿಕಾಂತ್‌ ಅವರ 167ನೇ ಸಿನಿಮಾ‘ದರ್ಬಾರ್‌’ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನುಎ.ಆರ್‌. ಮುರುಗದಾಸ್‌ ನಿರ್ದೇಶನ ಮಾಡಿದ್ದಾರೆ. ಇದುಸಂಕ್ರಾಂತಿಗೆ ತೆರೆಕಾಣುವ ಸಾಧ್ಯತೆಗಳಿವೆ. ಈ ನಡುವೆಸನ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ 168ನೇ ಚಿತ್ರದಲ್ಲಿ ನಟಿಸಲು ರಜನಿ ಒಪ್ಪಿಕೊಂಡಿದ್ದಾರೆ. ಹೊಸ ಚಿತ್ರವನ್ನುಸಿ ರುತೈ ಶಿವ ನಿರ್ದೇಶನ ಮಾಡಲಿದ್ದಾರೆ.ಇದೇ ಚಿತ್ರತಂಡದೊಂದಿಗೆ ಈ ಬಾರಿ ರಜನಿ ಹುಟ್ಟುಹಬ್ಬಆಚರಿಸಿಕೊಂಡಿದ್ದು ವಿಶೇಷ.

ರಜನಿಯ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಿನಿಮಾರಂಗದ ಗಣ್ಯರು, ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಅಭಿಮಾನಿಗಳು ರಜನಿಕಾಂತ್‌ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

'ಆರೋಗ್ಯ ಮತ್ತು ಯಶಸ್ಸು ದೊರೆಯಲಿ' ಎಂದುನಟ ಕಮಲ ಹಾಸನ್ ಟ್ವೀಟ್‌ ಮಾಡಿ ಶುಭ ಹಾರೈಸಿದ್ದಾರೆ.

'ನಾವು ಸದಾ ನಿಮ್ಮ ನಡೆಯನ್ನು ಅನುಸರಿಸುತ್ತೇವೆ, ನಿಮ್ಮತುಂಬಿದ ನಗುವ ನೋಡಲು’ ಜನ್ಮದಿನದ ಶುಭಾಶಯಗಳು ಅಪ್ಪ ಎಂದುಮಗಳು ಐಶ್ವರ್ಯ ಟ್ವೀಟ್‌ ಮಾಡಿದ್ದಾರೆ.

ತಮಿಳುನಾಡು ರಾಜಕಾರಣಕ್ಕೆ ಎಂಟ್ರಿಯಾಗುವ ಸೂಚನೆ ನೀಡಿರುವ ರಜನಿ, ಕಮಲ ಹಾಸನ್ ಜೊತೆಗೂಡಿ ರಾಜಕೀಯ ರಂಗರೂಪಿಸುವ ಸಾಧ್ಯತೆಗಳಿವೆ. ಈಗಾಗಲೇ ಈ ಬಗ್ಗೆ ಸುಳಿವು ನೀಡಿರುವ ರಜನಿ 2021ರ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುವುದು ಸ್ಪಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.