ADVERTISEMENT

ಮಿಥಾಲಿಯಾಗಿ ಬ್ಯಾಟ್‌ ಬೀಸಲಿದ್ದಾರೆ ತಾಪ್ಸಿ ಪನ್ನು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 19:31 IST
Last Updated 4 ಡಿಸೆಂಬರ್ 2019, 19:31 IST
ತಾಪ್ಸಿಗೆ ಕೇಕ್‌ ತಿನ್ನಿಸುತ್ತಿರುವ ಮಿಥಾಲಿ ರಾಜ್‌
ತಾಪ್ಸಿಗೆ ಕೇಕ್‌ ತಿನ್ನಿಸುತ್ತಿರುವ ಮಿಥಾಲಿ ರಾಜ್‌   

ಬಾಲಿವುಡ್‌ನಲ್ಲಿ ಸ್ಪೋಟ್ಸ್‌ ಕ್ರೇಜ್‌ ಚಿತ್ರಗಳ ಅಬ್ಬರ ತುಂಬಾ ಜೋರಾಗಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಹೇಂದ್ರ ಸಿಂಗ್‌ ಧೋನಿ ಬಯೋಪಿಕ್‌ ಸೂಪರ್‌ ಡ್ಯೂಪರ್‌ ಹಿಟ್‌ ಆದದ್ದೇ ತಡ ಕ್ರೀಡಾ ತಾರೆಗಳ ಮೇಲೆ ಸಾಲು ಸಾಲು ಬಯೋಪಿಕ್‌ ತೆರೆಗೆ ಬರುತ್ತಿವೆ.

ಈಗಾಗಲೇ ಬ್ಯಾಡ್ಮಿಂಟನ್‌ ತಾರೆ ಸೈನಾ ನೆಹ್ವಾಲ್‌ ಜೀವನ ಆಧರಿತ ಸಿನಿಮಾದಲ್ಲಿ ಪರಿಣೀತಿ ಚೋಪ್ರಾ ಬ್ಯುಸಿಯಾಗಿದ್ದಾರೆ. ಅದರ ಬೆನ್ನಲ್ಲೇ ಭಾರತದ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್‌ ಮಿಥಾಲಿ ದೊರೈ ರಾಜ್‌ ಅವರ ಬಯೋಪಿಕ್‌ ಬಾಲಿವುಡ್‌ನಲ್ಲಿ ಸಿದ್ಧವಾಗುತ್ತಿದೆ.

ಮಿಥಾಲಿ ರಾಜ್ ಡಿ.3ರಂದು 37ನೇ ಜನ್ಮದಿನದ ಆಚರಿಸಿಕೊಂಡರು. ಇದೇ ದಿನಕ್ಕಾಗಿ ಕಾಯುತ್ತಿದ್ದ ಬಾಲಿವುಡ್ ಬೆಡಗಿ ತಾಪ್ಸಿ ಪನ್ನು ಟ್ವಿಟರ್‌ ಮೂಲಕ ಹೊಸ ವಿಷಯ ಬಹಿರಂಗಪಡಿಸಿದ್ದಾರೆ.

ADVERTISEMENT

ರಾಹುಲ್‌ ದೊಲಾಕಿಯನಿರ್ದೇಶನದಲ್ಲಿ ಮೂಡಿಬರುತ್ತಿರುವ ಮಿಥಾಲಿ ಬಯೋಪಿಕ್‌ನಲ್ಲಿ ತಾಪ್ಸಿ ಪನ್ನು, ಮಿಥಾಲಿ ಪಾತ್ರಕ್ಕೆ ಜೀವತುಂಬಲಿದ್ದಾರಂತೆ.ಮಿಥಾಲಿ ಜತೆಗಿನ ಜನ್ಮದಿನದ ಸಂಭ್ರಮದ ಚಿತ್ರಗಳನ್ನು ತಾಪ್ಸಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಸ್ಕ್ರೀನ್‌ನಲ್ಲಿ ನಿಮ್ಮನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸಲು ನಾನು ಎಲ್ಲಾ ಪ್ರಯತ್ನವನ್ನೂ ಮಾಡುತ್ತೇನೆ. ಅದಕ್ಕಾಗಿ ನಿಮ್ಮಿಂದ ಕವರ್‌ ಡ್ರೈವ್‌ ಕಲಿತುಕೊಳ್ಳಬೇಕು’ ಎಂದು ಬರೆದಿದ್ದಾರೆ.

ಈ ಬಯೋಪಿಕ್‌ಗೆ ‌‌‌‌‌’ಶಬ್ಬಾಶ್ ಮಿಥು’ ಎಂಬ ಹೆಸರು ಇಡಲಾಗಿದೆ. ವೈಯಕಾಮ್‌ 18 ಮೋಷನ್‌ ಪಿಚ್ಚರ್‌ ಚಿತ್ರಕ್ಕೆ ಬಂಡವಾಳ ಹೂಡಿದೆ.ಮಿಥಾಲಿ ರಾಜ್‌ ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿಯಾಗಿ ಆಗಿಒಂದಕ್ಕಿಂತ ಹೆಚ್ಚು ಬಾರಿಐಸಿಸಿ ಏಕದಿನ ಪಂದ್ಯ ಆಡಿದ ಮೊದಲಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ಲೇಡಿ ತೆಂಡೂಲ್ಕರ್‌’ ಎಂದೂ ಪ್ರೀತಿಯಿಂದ ಕರೆಯುತ್ತಾರೆ. ಅಂತರ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ವರ್ಷ ಪೂರೈಸಿದ ಮೊದಲ ಮಹಿಳೆ ಮಿಥಾಲಿ ರಾಜ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.