ADVERTISEMENT

'ಭೂತ್ ಬಂಗ್ಲಾ' ಚಿತ್ರದಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಜತೆ ಟಬು ಅಭಿನಯ

ಪಿಟಿಐ
Published 13 ಜನವರಿ 2025, 8:29 IST
Last Updated 13 ಜನವರಿ 2025, 8:29 IST
<div class="paragraphs"><p>ನಟಿ&nbsp;ಟಬು </p></div>

ನಟಿ ಟಬು

   

ಮುಂಬೈ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಅಭಿನಯದ ಹಾರರ್‌ ಮತ್ತು ಹಾಸ್ಯ ಪ್ರಧಾನ 'ಭೂತ್ ಬಂಗ್ಲಾ' ಚಿತ್ರದಲ್ಲಿ ಬಹುಭಾಷಾ ನಟಿ ಟಬು ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡು ನಟಿ ಟಬು ಮಾಹಿತಿ ನೀಡಿದ್ದಾರೆ.

ADVERTISEMENT

ಸುಮಾರು 14 ವರ್ಷಗಳ ಬಳಿಕ ಹಾರರ್‌ ಮತ್ತು ಹಾಸ್ಯ ಪ್ರಧಾನ ಚಿತ್ರ 'ಭೂತ್ ಬಂಗ್ಲಾ' ಮೂಲಕ ನಿರ್ದೇಶಕ ಪ್ರಿಯದರ್ಶನ್ ಹಾಗೂ ಅಕ್ಷಯ್ ಕುಮಾರ್ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ಪರೇಶ್ ರಾವಲ್, ಜಿಸ್ಶು ಸೇನ್‌ಗುಪ್ತಾ ಮತ್ತು ವಾಮಿಕಾ ಸಹ ನಟಿಸಿದ್ದು, ಚಿತ್ರವು ಏಪ್ರಿಲ್ 2, 2026 ರಂದು ಬಿಡುಗಡೆಯಾಗಲಿದೆ. ‘ಭೂತ್ ಬಂಗ್ಲಾ‘ ಚಿತ್ರದ ಫಸ್ಟ್‌ ಲುಕ್‌ ಅನ್ನು ಸೆಪ್ಟೆಂಬರ್‌ 9ರಂದು ಅಕ್ಷಯ್‌ ಕುಮಾರ್‌ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡಿತ್ತು.

2010ರಲ್ಲಿ ತೆರೆಕಂಡ 'ಖಟ್ಟಾ ಮೀಠಾ'ದಲ್ಲಿ ಪ್ರಿಯದರ್ಶನ್ ಜತೆಗೆ ಕೆಲಸ ಮಾಡಿದ್ದೆ. 14 ವರ್ಷಗಳ ಬಳಿಕ ಮತ್ತೆ ಅವರೊಂದಿಗೆ ಸಿನಿಮಾ ಮಾಡಲು ಉತ್ಸುಕನಾಗಿದ್ದೇನೆ. ತೆರೆ ಮೇಲೆ ಈ ಚಿತ್ರ ಮ್ಯಾಜಿಕ್‌ ಮಾಡಲಿದೆ ನಿರೀಕ್ಷಿಸಿ’ ಎಂದು ಎಕ್ಸ್‌ನಲ್ಲಿ ತಿಳಿಸಿದ್ದರು.

ಅಕ್ಷಯ್ ಮತ್ತು ಪ್ರಿಯದರ್ಶನ್, 'ಹೇರಾ ಫೇರಿ', 'ಗರಂ ಮಸಾಲಾ', 'ಭೂಲ್ ಭುಲೈಯಾ', 'ದೇ ದನಾ ದಾನ್', ಮತ್ತು 'ಭಾಗಂ ಭಾಗ್' ನಂತಹ ಹಲವಾರು ಹಾಸ್ಯ ಪ್ರಧಾನ ಚಿತ್ರಗಳಲ್ಲಿ ಕೆಲಸ ಮಾಡಿದ್ದರು.

ಕೇಪ್ ಆಫ್ ಗುಡ್ ಫಿಲ್ಮ್ಸ್ ಮತ್ತು ಬಾಲಾಜಿ ಟೆಲಿಫಿಲ್ಮ್ಸ್ ಲಿಮಿಟೆಡ್ ಈ ಚಿತ್ರವನ್ನು ನಿರ್ಮಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.