ತಮನ್ನಾ ಭಾಟಿಯಾ, ವಶಿಷ್ಠ ಸಿಂಹ
ಬೆಂಗಳೂರು: ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಸಂಗಮ್ ಘಾಟ್‌ನಲ್ಲಿ ಪುಣ್ಯ ಸ್ನಾನ ಮಾಡಿದರು.
ವಿಶೇಷವೆಂದರೆ ನಟಿ ತಮನ್ನಾಗೆ ಈ ವೇಳೆ ಕನ್ನಡದ ನಟ ವಶಿಷ್ಠ ಸಿಂಹ ಅವರು ಸಾಥ್ ನೀಡಿದರು.
ತೆಲುಗಿನಲ್ಲಿ ಅಶೋಕ್ ತೇಜಾ ಅವರು ನಿರ್ದೇಶಿಸಿರುವ ಬಿಡುಗಡೆಗೆ ಸಿದ್ದವಾಗಿರುವ ಒಡೆಲಾ–2 (2022ರ ಒಡೆಲಾ ರೈಲ್ವೆ ಸ್ಟೇಷನ್ ಸಿನಿಮಾದ ಸೀಕ್ವೆಲ್) ಹಾರರ್, ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಮಿಲ್ಕಿ ಬ್ಯೂಟಿ ಹಾಗೂ ವಶಿಷ್ಠ ಸಿಂಹ ಮುಖ್ಯಪಾತ್ರಗಳಲ್ಲಿದ್ದಾರೆ. ಹೀಗಾಗಿ ಒಡೆಲಾ–2 ಚಿತ್ರತಂಡ ಸಂಗಮದಲ್ಲಿ ಮಿಂದೆದ್ದಿತು.
ಈ ಚಿತ್ರದಲ್ಲಿ ತಮನ್ನಾ ಭಾಟಿಯಾ ಸಾಧ್ವಿಯಾಗಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಕುಂಭಮೇಳದಲ್ಲಿಯೇ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.
ಮಹಾಕುಂಭಮೇಳದಲ್ಲಿ ಭಾಗವಹಿಸಿ ಮಾತನಾಡಿದ ತಮನ್ನಾ ಭಾಟಿಯಾ, ಇದು ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಅವಕಾಶ. ನನಗಂತೂ ತುಂಬಾ ಖುಷಿಯಾಯಿತು. ಎಲ್ಲರ ನಂಬಿಕೆಯಿಂದಲೇ ಇಷ್ಟೊಂದು ದೊಡ್ಡ ಸಮಾರಂಭ ನಡೆದಿರುವುದಕ್ಕೆ ಇದು ಸಾಧ್ಯವಾಗಿದೆ ಎಂದಿದ್ದಾರೆ. ಈ ಕುರಿತು ಸುದ್ದಿಸಂಸ್ಥೆ ಎಎನ್‌ಐ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
2022ರ ಒಡೆಲಾ ರೈಲ್ವೆ ಸ್ಟೇಷನ್ ಸಿನಿಮಾದಲ್ಲಿಯೂ ವಶಿಷ್ಠ ಸಿಂಹ ಪ್ರಮುಖ ಪಾತ್ರದಲ್ಲಿದ್ದರು. ಈ ಚಿತ್ರಕ್ಕೆ ಸಿನಿಪ್ರಿಯರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಆಹಾ ಒಟಿಟಿಯಲ್ಲಿ ಲಭ್ಯವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.