ADVERTISEMENT

ನಟಿ ತಮನ್ನಾ ಭಾಟಿಯಾ ಹೊಸ ಸಿನಿಮಾದ ಪೋಸ್ಟರ್ ಬಿಡುಗಡೆ: ಜಯಶ್ರೀಯಾದ ಮಿಲ್ಕಿ ಬ್ಯೂಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಡಿಸೆಂಬರ್ 2025, 12:28 IST
Last Updated 9 ಡಿಸೆಂಬರ್ 2025, 12:28 IST
<div class="paragraphs"><p>ನಟಿ&nbsp;ತಮನ್ನಾ ಭಾಟಿಯಾ</p></div>

ನಟಿ ತಮನ್ನಾ ಭಾಟಿಯಾ

   

ಚಿತ್ರ: ಇನ್‌ಸ್ಟಾಗ್ರಾಂ

ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ನಟಿ ತಮನ್ನಾ ಭಾಟಿಯಾ ಅವರು ಅಭಿಮಾನಿಗಳಿಗೆ ಮುಂದಿನ ಸಿನಿಮಾದ ಕುರಿತು ಅಪ್‌ಡೇಟ್‌ ಒಂದನ್ನು ಕೊಟ್ಟಿದ್ದಾರೆ. ನಟಿ ತಮನ್ನಾ ಭಾಟಿಯ ‘ವಿ. ಶಾಂತಾರಾಮ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಇದೇ ಸಿನಿಮಾದಲ್ಲಿ ಜಯಶ್ರೀ ಎಂಬ ಪಾತ್ರದ ಪೋಸ್ಟರ್‌ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಶಾಂತಾರಾಮ್‌ ಸಿನಿಮಾದ ಮೊದಲ ಪೋಸ್ಟರ್‌ ಹಂಚಿಕೊಂಡ ನಟಿ, ‘ಒಂದು ಯುಗದ ನಕ್ಷತ್ರ ಪರಂಪರೆಯ ಹಿಂದಿನ ಶಕ್ತಿ. ಇತಿಹಾಸಕ್ಕೆ ಮರಳುವ ಅಧ್ಯಾಯ’ ಎಂದು ಬರೆದಕೊಂಡಿದ್ದಾರೆ. ಆ ಪೋಸ್ಟರ್‌ನಲ್ಲಿ ತಿಳಿ ಗುಲಾಬಿ ಸೀರೆಯಲ್ಲಿ ಫೋಸ್‌ ಕೊಟ್ಟಿದ್ದು, ಈ ಚಿತ್ರ ಎಲ್ಲರ ಗಮನ ಸೆಳೆಯುತ್ತಿದೆ. ನಿರ್ಮಾಪಕ ವಿ. ಶಾಂತಾರಾಮ್ ಅವರ ಅವರ ಜೀವನ ಹಾಗೂ ಅಸಾಧಾರಣ ಸಾಧನೆ ಕುರಿತ ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾಗೆ ಜೋಡಿಯಾಗಿ ನಟ ಸಿದ್ಧಾಂತ್ ಚತುರ್ವೇದಿ ನಟಿಸಲಿದ್ದಾರೆ.

ಅಭಿಜೀತ್ ಶಿರೀಶ್ ದೇಶಪಾಂಡೆ ಬರೆದು ನಿರ್ದೇಶಿಸಿರುವ 'ವಿ. ಶಾಂತಾರಾಮ್' ಸಿನಿಮಾವನ್ನು ರಾಜ್‌ಕಮಲ್ ಎಂಟರ್‌ಟೈನ್‌ಮೆಂಟ್, ಕ್ಯಾಮೆರಾ ಟೇಕ್ ಫಿಲ್ಮ್ಸ್ ಮತ್ತು ರೋರಿಂಗ್ ರಿವರ್ಸ್ ಪ್ರೊಡಕ್ಷನ್ಸ್ ಪ್ರಸ್ತುತಪಡಿಸುತ್ತಿವೆ. ರಾಹುಲ್ ಕಿರಣ್ ಶಾಂತಾರಾಮ್, ಸುಭಾಷ್ ಕಾಳೆ ಮತ್ತು ಸರಿತಾ ಅಶ್ವಿನ್ ವರ್ದೆ ಈ ಸಿನಿಮಾದ ನಿರ್ಮಾಪಕರು ಆಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.