ADVERTISEMENT

‘ಕಿರಾತಕ’ ಖ್ಯಾತಿಯ ಬಹುಭಾಷಾ ನಟ ಡೇನಿಯಲ್ ಬಾಲಾಜಿ ಹೃದಯಾಘಾತದಿಂದ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಮಾರ್ಚ್ 2024, 5:18 IST
Last Updated 30 ಮಾರ್ಚ್ 2024, 5:18 IST
<div class="paragraphs"><p>ಡೇನಿಯಲ್ ಬಾಲಾಜಿ</p></div>

ಡೇನಿಯಲ್ ಬಾಲಾಜಿ

   

ಚೆನ್ನೈ: ಬಹುಭಾಷಾ ನಟ ಡೇನಿಯಲ್ ಬಾಲಾಜಿ (48) ಅವರು ಇಂದು (ಶನಿವಾರ) ಹೃದಯಾಘಾತದಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈಚೆಗೆ ಡೇನಿಯಲ್ ಬಾಲಾಜಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ADVERTISEMENT

ಡೇನಿಯಲ್ ಬಾಲಾಜಿ ಅವರು ತಮಿಳು ಕಿರುತೆರೆ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ‘ಚಿತ್ತಿ’ ಧಾರಾವಾಹಿಯಲ್ಲಿನ ಪಾತ್ರಕ್ಕಾಗಿ ಹೆಚ್ಚು ಖ್ಯಾತಿ ಪಡೆದಿದ್ದರು. ಬಳಿಕ ‘ಕಾಖಾ ಕಾಖಾ’, ‘ಪೊಲ್ಲಾಧವನ್’, ‘ವೆಟ್ಟೈಯಾಡು‌ ವಿಲಾಯಾಡು’, ‘ವಡಾ ಚೆನ್ನೈ’ ‘ಬಿಗಿಲ್‌’ ಸೇರಿದಂತೆ 40ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಯಶ್‌ ಅಭಿನಯದ ‘ಕಿರಾತಕ’ ಚಿತ್ರದಲ್ಲೂ ಡೇನಿಯಲ್ ಕಾಣಿಸಿಕೊಂಡಿದ್ದರು. ಜತೆಗೆ, ತೆಲುಗು, ಮಲಯಾಳಂ ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.

ಡೇನಿಯಲ್ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ. ಡೇನಿಯಲ್ ಅವರ ಅಂತ್ಯಕ್ರಿಯೆ ಪುರಸೈವಾಲ್ಕಂನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.