ADVERTISEMENT

ತಮಿಳು ನಟ ರೋಬೊ ಶಂಕರ್‌ ನಿಧನ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 4:58 IST
Last Updated 19 ಸೆಪ್ಟೆಂಬರ್ 2025, 4:58 IST
   

ಚೆನ್ನೈ: ತಮಿಳು ನಟ ರೋಬೊ ಶಂಕರ್‌ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು.

ರೋಬೊ ಶಂಕರ್‌ ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.

ಸೋಮವಾರ ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡು ಬಿದ್ದಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವೈದ್ಯರು ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ನೀಡಿದ್ದರು.

ADVERTISEMENT

ಜೀರ್ಣಾಂಗದಲ್ಲಿ ರಕ್ತಸ್ರಾವ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ಶಂಕರ್‌ ನಿಧನರಾದರು ಎಂದು ಜಿಇಎಂ ಆಸ್ಪತ್ರೆಯ ಸಿಇಒ ಡಾ. ಎಸ್. ಅಶೋಕನ್ ಗುರುವಾರ ರಾತ್ರಿ 8.30ಕ್ಕೆ ಘೋಷಣೆ ಮಾಡಿದರು.

ಶಂಕರ್‌ ನಿಧನಕ್ಕೆ ತಮಿಳುನಾಡು ಚಿತ್ರರಂಗದ ಗಣ್ಯರು ಹಾಗೂ ಅವರ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್‌, ನಟ ಧನುಷ್‌, ವಿಜಯ್‌ ಸೇತುಪತಿ ಸೇರಿದಂತೆ ಹಲವರು ಅವರ ನಿವಾಸಕ್ಕೆ ಭೇಟಿ ಮಾಡಿ ಅಂತಿಮ ದರ್ಶನ ಪಡೆದರು. 

ನೂರಾರು ತಮಿಳು ಸಿನಿಮಾಗಳಲ್ಲಿ ನಟಿಸಿದ್ದ ಅವರು ಪೋಷಕ ಪಾತ್ರಗಳು ಸೇರಿದಂತೆ ಹಾಸ್ಯ ನಟನೆಯಲ್ಲೂ ಜನಪ್ರಿಯತೆಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.