ADVERTISEMENT

ಪ್ರಿನ್ಸ್‌ ಟೀಸರ್‌ ವೈರಲ್‌, ರಶ್ಮಿಕಾ ಮಿಸ್ಸಿಂಗ್!

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 19:30 IST
Last Updated 26 ನವೆಂಬರ್ 2019, 19:30 IST
ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ
ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ   

ತೆಲುಗು ನಟ ಪ್ರಿನ್ಸ್‌ ಮಹೇಶ್‌ ಬಾಬು ನಟನೆಯ ಫ್ಯಾಮಿಲಿ ಡ್ರಾಮಾ ‘ಸರಿಲೇರು ನೀಕೆವುರು’ ಚಿತ್ರದ ಟೀಸರ್‌ ವೈರಲ್‌ ಆಗಿದೆ. ವಿಶೇಷ ಎಂದರೆ ಮಹೇಶ್‌ ನಾಯಕಿಯಾಗಿ ನಟಿಸಿದ ರಶ್ಮಿಕಾ ಮಂದಣ್ಣ ಈ ಟೀಸರ್‌ನಲ್ಲಿ ಕಾಣೆಯಾಗಿದ್ದಾರೆ. ಈ ಚಿತ್ರಕ್ಕಾಗಿ ಬಹಳ ದಿನಗಳ ನಂತರ ವಿಜಯಶಾಂತಿಮುಖಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಕಾಶ್‌ ರಾಜ್‌ ಎಂದಿನಂತೆ ನಟನೆಯಿಂದ ಗಮನ ಸೆಳೆಯುತ್ತಾರೆ.

ಟೀಸರ್‌ ಬಿಡುಗಡೆಯಾದ ಕೆಲವು ಹೊತಯ್ತಿನಲ್ಲಿಯೇ ಲಕ್ಷಾಂತರ ಜನರು ಈ ಟೀಸರ್‌ ವೀಕ್ಷಿಸಿದ್ದಾರೆ. ಟಾಲಿವುಡ್‌ ಇತಿಹಾಸದಲ್ಲಿಯೇ ಇದೊಂದು ದಾಖಲೆ ಎನ್ನಲಾಗಿದೆ.ಮುಂದಿನ ಸಂಕ್ರಾತಿ ವೇಳೆಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT