ADVERTISEMENT

ತೆಲುಗು ನಟ ಶ್ರೀವಾತ್ಸವ್ ಚಂದ್ರಶೇಖರ್ ನಿಗೂಢ ಸಾವು, ಆತ್ಮಹತ್ಯೆ ಶಂಕೆ: ವರದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಫೆಬ್ರುವರಿ 2021, 3:02 IST
Last Updated 7 ಫೆಬ್ರುವರಿ 2021, 3:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್: ತೆಲುಗು ನಟ ಶ್ರೀವಾತ್ಸವ್ ಚಂದ್ರಶೇಖರ್ ಮೃತಪಟ್ಟಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದುವರದಿಯಾಗಿದೆ. ಅವರು 2019ನೇ ವರ್ಷದಲ್ಲಿ ತಮಿಳು ಸೂಪರ್ ಸ್ಟಾರ್ ಧನುಷ್ ಜೊತೆಗೆ ತೆರೆ ಹಂಚಿಕೊಂಡಿದ್ದರು.

ಶ್ರೀವಾತ್ಸವ್ ಚಂದ್ರಶೇಖರ್ ಗುರುವಾರ ಆತ್ಮಹತ್ಯೆಗೆ ಶರಣಾಗಿದ್ದು, ಶುಕ್ರವಾರ ಅಂತ್ಯ ಸಂಸ್ಕಾರ ನೇರವೇರಿಸಲಾಗಿದೆ ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ತಂದೆ ಹೊಂದಿರುವ ಮನೆಯಲ್ಲೇ ಶ್ರೀವಾತ್ಸವ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಮಾನಸಿಕವಾಗಿ ಖಿನ್ನತೆ ಅನುಭವಿಸುತ್ತಿದ್ದ ಶ್ರೀವಾತ್ಸವ್ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ADVERTISEMENT

ಧನುಷ್ ಜೊತೆಗೆ 'ಎನ್ನಯ್ ನೋಕಿ ಪಾಯುನ್ ತೊಟ್ಟಾ' ಸಿನಿಮಾದಲ್ಲಿ ಶ್ರೀವಾತ್ಸವ್ ಸಹ ನಟನಾಗಿ ಅಭಿನಯಿಸಿದ್ದರು. 'ವಲ್ಲಮಯ್ ತರುವಾಯೊ' ವೆಬ್ ಸಿರೀಸ್‌ನಲ್ಲೂ ಗುರುತಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.