ADVERTISEMENT

KVN ನಿರ್ಮಾಣದ ಜನ ನಾಯಕನ್ ಸಿನಿಮಾ ತಯಾರಿ ಜೋರು: ಮೇಕಿಂಗ್ ವಿಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 14:15 IST
Last Updated 5 ಸೆಪ್ಟೆಂಬರ್ 2025, 14:15 IST
<div class="paragraphs"><p>KVN ನಿರ್ಮಾಣದ ಜನ ನಾಯಕನ್ ಸಿನಿಮಾ ತಯಾರಿ ಜೋರು: ಮೇಕಿಂಗ್ ವಿಡಿಯೊ ಬಿಡುಗಡೆ</p></div>

KVN ನಿರ್ಮಾಣದ ಜನ ನಾಯಕನ್ ಸಿನಿಮಾ ತಯಾರಿ ಜೋರು: ಮೇಕಿಂಗ್ ವಿಡಿಯೊ ಬಿಡುಗಡೆ

   

ಬೆಂಗಳೂರು: ಕೆ.ವಿ.ಎನ್ ಸಂಸ್ಥೆಯ ವೆಂಕಟ್ ಕೆ.ನಾರಾಯಣ ನಿರ್ಮಾಣದ ಬಿಗ್ ಬಜೆಟ್ ಚಿತ್ರವಾಗಿರುವ ದಳಪತಿ ವಿಜಯ್ ನಟನೆಯ 'ಜನ ನಾಯಕನ್’ ಚಿತ್ರದ ತಯಾರಿ ಜೋರಾಗಿ ನಡೆದಿದೆ.

ಈ ಬಹುನಿರೀಕ್ಷಿತ ಚಿತ್ರ ಬರುವ ಜನವರಿ 9ಕ್ಕೆ ಬಿಡುಗಡೆ ಆಗಲಿದೆ ಎಂದು ಹೇಳಲಾಗಿದೆ. ಏತನ್ಮಧ್ಯೆ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಬರದಿಂದ ಸಾಗಿದ್ದು, ಈ ಚಿತ್ರದ ನಿರ್ದೇಶಕ ಎಚ್.ವಿನೋದ್ ಅವರ ಜನ್ಮದಿನದ ಪ್ರಯುಕ್ತ ಜನ ನಾಯಕನ್ ಮೇಕಿಂಗ್ ವಿಡಿಯೊ ಬಿಡುಗಡೆ ಮಾಡಿದೆ.

ADVERTISEMENT

ವಿನೋದ್ ಅವರು ‘ಥಿರನ್ ಅಧಿಗಾರಂ ಒಂಡ್ರು’, ‘ವಲಿಮೈ’ ಸೇರಿದಂತೆ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ.

ಕೆವಿಎನ್ ಈ ವಿಡಿಯೊವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದೆ. ದಳಪತಿ ವಿಜಯ್ ನಟನೆಯ 69ನೇ ಚಿತ್ರ ಇದಾಗಿದೆ. ಈ ‘ಚಿತ್ರವನ್ನು ಭಾರತ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆ ಮಾಡಲು ತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿಜಯ್ ಅವರ ಪೊಲೀಸ್ ಖದರ್ ಲುಕ್, ರಾಯಲ್ ಸಿಂಹಾಸನದ ಮೇಲೆ ಖಡ್ಗ ಹಿಡಿದು ಕುಳಿತಿರುವ ಇತ್ತೀಚಿನ ಮಾಸ್ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿತ್ತು.

ವಿಜಯ್ ಅವರು ಈ ಸಿನಿಮಾದ ಜೊತೆ ರಾಜಕೀಯದ ಕಡೆಯೂ ಹೆಚ್ಚಾಗಿ ಗಮನ ಹರಿಸುತ್ತಿದ್ದು, ತಮ್ಮದೇ ಹೊಸ ಪಕ್ಷದ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ಜನ ನಾಯಕನ್ ವಿಜಯ್ ಅವರ ಕೊನೆಯ ಚಿತ್ರವಾಗಿದೆ.

ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಗ್ರಹಣ, ಆನ್ಲ್ ಅರಸು ಸಾಹಸ, ಪ್ರದೀಪ್ ಇ. ರಾಘವ್ ಸಂಕಲನ, ಶೇಖರ್ ವಿ.ಜಿ, ಸುಧನ್ ನೃತ್ಯ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.