ADVERTISEMENT

ದಳಪತಿ ವಿಜಯ್ ನಟನೆಯ ‘ಜನ ನಾಯಗನ್‌’ ಚಿತ್ರದ ಫಸ್ಟ್‌ಲುಕ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಜೂನ್ 2025, 14:21 IST
Last Updated 30 ಜೂನ್ 2025, 14:21 IST
<div class="paragraphs"><p>ನಿರ್ಮಾಪಕ ವೆಂಕಟ್ ಕೆ.ನಾರಾಯಣ್ (ಎಡ), ದಳಪತಿ ವಿಜಯ್ ಪೊಲೀಸ್ ಉಡುಗೆಯಲ್ಲಿ</p></div>

ನಿರ್ಮಾಪಕ ವೆಂಕಟ್ ಕೆ.ನಾರಾಯಣ್ (ಎಡ), ದಳಪತಿ ವಿಜಯ್ ಪೊಲೀಸ್ ಉಡುಗೆಯಲ್ಲಿ

   

ಪ್ರಜಾವಾಣಿ ಚಿತ್ರ

ದಳಪತಿ ವಿಜಯ್ ನಟನೆಯ 'ಜನ ನಾಯಗನ್’ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದ್ದು, 24 ಗಂಟೆಗಳಲ್ಲಿ 3.2 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.

ADVERTISEMENT

ಕೆ.ವಿ.ಎನ್ ಸಂಸ್ಥೆ ನಿರ್ಮಾಣ ಮಾಡಿರುವ ಈ ‘ಚಿತ್ರವನ್ನು ಭಾರತ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆ ಮಾಡಲು ತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. 2026ರ ಜನವರಿ 9ರಂದು ಚಿತ್ರ ತೆರೆಗೆ ಬರಲಿದೆ.

ದಳಪತಿ ವಿಜಯ್ ನಟನೆಯ 69ನೇ ಚಿತ್ರ ಇದಾಗಿದೆ. ವಿಜಯ್ ಅವರ 51ನೇ ಹುಟ್ಟುಹಬ್ಬ ಹಿನ್ನೆಲೆ ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಫಸ್ಟ್‌ ಲುಕ್‌ಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.

ವಿಜಯ್ ಅವರ ಪೊಲೀಸ್ ಖದರ್ ಲುಕ್, ರಾಯಲ್ ಸಿಂಹಾಸನದ ಮೇಲೆ ಖಡ್ಗ ಹಿಡಿದು ಕುಳಿತಿರುವ ಮಾಸ್ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ.

ವಿಜಯ್ ಅವರು, ಸಿನಿಮಾಗಿಂತಲೂ ರಾಜಕೀಯದ ಕಡೆ ಹೆಚ್ಚಾಗಿ ಗಮನ ಹರಿಸುತ್ತಿದ್ದು, ತಮ್ಮದೇ ಹೊಸ ಪಕ್ಷದ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಇವರ ಕೊನೆಯ ಚಿತ್ರವಾಗಿದೆ.

ವೆಂಕಟ್ ಕೆ.ನಾರಾಯಣ ನಿರ್ಮಾಣದ ಈ ದೊಡ್ಡ ಬಜೆಟ್ ಚಿತ್ರವನ್ನು ಎಚ್.ವಿನೋತ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅನಿರುದ್ಧ್‌ ರವಿಚಂದರ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಚಿತ್ರಗ್ರಹಣ, ಆನ್ಲ್ ಅರಸು ಸಾಹಸ, ಪ್ರದೀಪ್ ಇ. ರಾಘವ ಸಂಕಲನ, ಶೇಖರ್ ವಿ.ಜಿ., ಸುಧನ್ ನೃತ್ಯ ನಿರ್ದೇಶನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.