ದರ್ಶನ್ ಜೊತೆ ಯುವರಾಜ್ ಹೇಮಂತ್
ಚಿತ್ರ: ಇನ್‌ಸ್ಟಾಗ್ರಾಂ
ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ನಿನ್ನೆ (ಗುರುವಾರ) ಬಿಡುಗಡೆಯಾಗಿ ರಾಜ್ಯದಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಏಕಪರದೆ ಮೇಲೆ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಸಿನಿಮಾದಲ್ಲಿ ಸಿಎಂ ಪುತ್ರ ಧನುಷ್ ರಾಜಶೇಖರ್ (ಡೆವಿಲ್) ಅವರ ಬಾಲ್ಯದ ಪಾತ್ರದಲ್ಲಿ ನಟಿಸಿರುವ ನಟ ಯಾರು? ಎಂಬ ಕುತೂಹಲ ವೀಕ್ಷಕರಲ್ಲಿ ಎದುರಾಗಿದೆ.
ಡೆವಿಲ್ ಸಿನಿಮಾದಲ್ಲಿ ದರ್ಶನ್ (ಸಿಎಂ ಪುತ್ರ ಧನುಷ್ ರಾಜಶೇಖರ್) ಯುವಕನಾಗಿದ್ದ ಪಾತ್ರದಲ್ಲಿ ನಟಿಸಿರುವುದು ಬೇರೆ ಯಾರೂ ಅಲ್ಲ, ಆತ ಕನ್ನಡದ ಯುವ ನಟ ಯುವರಾಜ್ ಹೇಮಂತ್. ಸದ್ಯ, ಡೆವಿಲ್‌ನಲ್ಲಿ ಕೆಲವೇ ನಿಮಿಷಗಳ ಕಾಲ ಪರದೆ ಮೇಲೆ ಬಂದು ಹೋಗುವ ಯುವರಾಜ್ ಹೇಮಂತ್ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಈ ನಡುವೆ ಡೆವಿಲ್ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿರುವುದಕ್ಕೆ ದರ್ಶನ್ ಅವರಿಗೆ ಯುವರಾಜ್ ಹೇಮಂತ್ ಧನ್ಯವಾದ ತಿಳಿಸಿದ್ದಾರೆ. ‘ನಮ್ಮ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ಅವರಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನೀವು ‘ದಿ ಡೆವಿಲ್’ ಚಿತ್ರದ ಮೂಲಕ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೀರಿ’.
‘ನಿಮ್ಮ ಸ್ಫೂರ್ತಿ, ಮಾರ್ಗದರ್ಶನ, ಆಶೀರ್ವಾದ, ಬೆಂಬಲ ಮತ್ತು ಈ ದೊಡ್ಡ ಅವಕಾಶಕ್ಕಾಗಿ ನಾನು ಯಾವಾಗಲೂ ನಿಮಗೆ ಕೃತಜ್ಞನಾಗಿರುತ್ತೇನೆ. ಇಂದು ನಿಮ್ಮ ಅನುಪಸ್ಥಿತಿ ನನ್ನ ಮನಸ್ಸಿಗೆ ತುಂಬಾ ನೋವು ಮಾಡುತ್ತಿದೆ. ನೀವು ಶೀಘ್ರದಲ್ಲೇ ಬರುತ್ತೀರಿ ಎಂಬುದು ನನ್ನ ನಂಬಿಕೆ ಇದೆ’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.