ADVERTISEMENT

'ದಿ ಡೆವಿಲ್' ಟೀಸರ್‌: ನಟ ದರ್ಶನ್‌ ಅಭಿಮಾನಿಗಳಲ್ಲಿ ನೂರ್ಮಡಿಸಿದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 7:46 IST
Last Updated 16 ಫೆಬ್ರುವರಿ 2025, 7:46 IST
<div class="paragraphs"><p>ನಟ&nbsp;ದರ್ಶನ್‌</p></div>

ನಟ ದರ್ಶನ್‌

   

ಬೆಂಗಳೂರು: ನಟ ದರ್ಶನ್ ಜನ್ಮದಿನಕ್ಕೆ ‘ದಿ ಡೆವಿಲ್’ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದ್ದು ಡಿಬಾಸ್‌ ಅಭಿಮಾನಿಗಳಲ್ಲಿ ಸಂಭ್ರಮ ನೂರ್ಮಡಿಸಿದೆ.

‘ದಿ ಡೆವಿಲ್’ ಟೀಸರ್​ 1 ನಿಮಿಷ 4 ಸೆಕೆಂಡ್​ ಇದೆ. ಯಾವುದೇ ಡೈಲಾಗ್ ಇಲ್ಲದೇ ಅಬ್ಬರದ ಹಿನ್ನೆಲೆ ಸಂಗೀತದಲ್ಲಿ ‘ಚಾಲೆಂಜ್’ ಎಂಬ ಪದ ಮಾತ್ರ ಕೇಳುತ್ತದೆ. ದರ್ಶನ್‌ ಗನ್‌ ಹಿಡಿದು ಅಬ್ಬರಿಸಿರುವ ದೃಶ್ಯಗಳು ಅಭಿಮಾನಿಗಳಲ್ಲಿ ಸಿನಿಮಾದ ಮೇಲೆ ನಿರೀಕ್ಷೆ  ಹುಟ್ಟಿಸಿದೆ. 

ADVERTISEMENT

ಟೀಸರ್‌ ಬಿಡುಗಡೆಯಾಗಿ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ.

ಚಿತ್ರೀಕರಣ ಸಮಯದಲ್ಲಿ ದರ್ಶನ್ ಅವರು ಕೊಲೆ ಪ್ರಕರಣದಲ್ಲಿ ಆರೋಪಿ ಆಗಿ ಜೈಲು ಸೇರಿದ್ದರು. ಹಾಗಾಗಿ ಹಲವು ತಿಂಗಳ ಕಾಲ ‘ದಿ ಡೆವಿಲ್’ ಸಿನಿಮಾದ ಚಿತ್ರೀಕರಣ ಸ್ಥಗಿತವಾಗಿತ್ತು. ಸದ್ಯ ದರ್ಶನ ಜಾಮೀನು ಪಡೆದು ಹೊರಬಂದಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.