ADVERTISEMENT

ದಿ ಕಾಶ್ಮೀರ್‌ ಫೈಲ್ಸ್: ಅನುಪಮ್ ಖೇರ್ ನಟನೆಗೆ ಅಕ್ಷಯ್ ಕುಮಾರ್ ಮೆಚ್ಚುಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಮಾರ್ಚ್ 2022, 4:59 IST
Last Updated 15 ಮಾರ್ಚ್ 2022, 4:59 IST
   

ಬೆಂಗಳೂರು: 1990ರಲ್ಲಿ ಕಾಶ್ಮೀರದ ಪಂಡಿತರ ಮೇಲೆ ನಡೆದಿದ್ದ ದೌರ್ಜನ್ಯದ ಕುರಿತಾದ ಚಿತ್ರಣ ಹೊಂದಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಚಿತ್ರ ‘ದಿ ಕಾಶ್ಮೀರ್‌ ಫೈಲ್ಸ್‘ನಲ್ಲಿ ಅನುಪಮ್ ಖೇರ್ ನಟನೆಯನ್ನು ನಟ ಅಕ್ಷಯ್ ಕುಮಾರ್ ಶ್ಲಾಘಿಸಿದ್ದಾರೆ.

ಅನುಪಮ್ ಖೇರ್ ನಟನೆ ಕುರಿತು ಟ್ವೀಟ್ ಮಾಡಿರುವ ಅಕ್ಷಯ್, ಚಿತ್ರದಲ್ಲಿ ನಿಮ್ಮ ಅಭಿನಯ ಅದ್ಭುತವಾಗಿ ಮೂಡಿಬಂದಿದೆ. ಜನರು ದೊಡ್ಡ ಸಂಖ್ಯೆಯಲ್ಲಿ ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದಾರೆ ಎಂದು ಹೊಗಳಿದ್ದಾರೆ.

‘ದಿ ಕಾಶ್ಮೀರ್‌ ಫೈಲ್ಸ್‘ ಚಿತ್ರದ ಕುರಿತು ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದ್ದು, ತುಂಬಿದ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನವಾಗುತ್ತಿದೆ.

ADVERTISEMENT

ದಿ ಕಾಶ್ಮೀರ್‌ ಫೈಲ್ಸ್ ಚಿತ್ರಕ್ಕೆ ಕರ್ನಾಟಕ ಸಹಿತ ಹಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.

ಮಾರ್ಚ್ 11ರಂದು ಸಿನಿಮಾ ದೇಶದಾದ್ಯಂತ 630 ಪರದೆಗಳಲ್ಲಿ ತೆರೆಕಂಡಿತ್ತು. ಅದಾದ ಎರಡೇ ದಿನಗಳಲ್ಲಿ ಪ್ರದರ್ಶನವನ್ನು 2000 ಪರದೆಗಳಿಗೆ ವಿಸ್ತರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.