ADVERTISEMENT

ಕಾರ್ತಿಕ್‌ ಜಯರಾಮ್‌ ನಟನೆಯ ‘ದಿ ವೀರ್’ ಸಿನಿಮಾದ ಟೀಸರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 23:30 IST
Last Updated 24 ಅಕ್ಟೋಬರ್ 2025, 23:30 IST
ಕಾರ್ತಿಕ್‌ ಜಯರಾಮ್‌
ಕಾರ್ತಿಕ್‌ ಜಯರಾಮ್‌   

ಕಾರ್ತಿಕ್‌ ಜಯರಾಮ್‌ ನಟಿಸಿರುವ ‘ದಿ ವೀರ್’ ಸಿನಿಮಾದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಆರ್. ಲೋಹಿತ್​ ನಾಯಕ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ಮಾಸ್‌ ಆ್ಯಕ್ಷನ್‌ ಜಾನರ್‌ ಸಿನಿಮಾ. ಚಿತ್ರದಲ್ಲಿ ರೋಚಿತ್​ ಅವರು ವಿಲನ್​ ಅಭಿನಯಿಸಿದ್ದಾರೆ. ಮಂಜು ಪಾವಗಡ ಕೂಡ ನಟಿಸಿದ್ದಾರೆ. ಪ್ರಣಿತಿ ಅವರು ಈ ಸಿನಿಮಾದ ಮೂಲಕ ನಾಯಕಿಯಾಗಿದ್ದಾರೆ’ ಎಂದಿದೆ ಚಿತ್ರತಂಡ.

ಧ್ರುವ ಎಂ.ಬಿ. ಸಂಗೀತ, ದೇವೇಂದ್ರ ಛಾಯಾಚಿತ್ರಗ್ರಹಣ, ಆರ್ಯನ್ ಗೌಡ ಸಂಕಲನವಿದೆ. ಗೀತಾ ಜಯಶ್ರೀನಿವಾಸನ್ ಮತ್ತು ವಿಶಾಲ್ ತೇಜ್ ಬಂಡವಾಳ ಹೂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.