ADVERTISEMENT

ಅಬ್ಬಾಬ್ಬಾ... ತೆಲುಗು ನಟ ಮಹೇಶ್‌ ಬಾಬು ಸಂಭಾವನೆ ಎಷ್ಟು ಕೋಟಿ? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಮೇ 2022, 11:43 IST
Last Updated 11 ಮೇ 2022, 11:43 IST
ಮಹೇಶ್‌ ಬಾಬು
ಮಹೇಶ್‌ ಬಾಬು   

ಹೈದರಾಬಾದ್‌:ನಟ ಮಹೇಶ್‌ ಬಾಬು ಅಭಿನಯದ ಬಹುನಿರೀಕ್ಷಿತ ‘ಸರ್ಕಾರು ವಾರಿ ಪಾಟ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಬೆನ್ನಲ್ಲೇ ಅವರು ಚಿತ್ರವೊಂದಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿಚಾರ ಬಹಿರಂಗವಾಗಿದೆ.

ಟಾಲಿವುಡ್‌ನಲ್ಲಿ ಮಹೇಶ್‌ ಬಾಬು ಸ್ಟಾರ್‌ ನಟರಾಗಿದ್ದಾರೆ. ಅವರು ದೊಡ್ಡ ದೊಡ್ಡ ಬ್ಯಾನರ್‌ಗಳಲ್ಲಿ ಮಾತ್ರ ನಟಿಸುತ್ತಾರೆ. ಹಾಗೇ ಕತೆಯ ಆಯ್ಕೆಯಲ್ಲೂ ಎಚ್ಚರವಹಿಸುತ್ತಾರೆ.

ಸದ್ಯ ಅವರ‘ಸರ್ಕಾರು ವಾರಿ ಪಾಟ’ ನಾಳೆ ( ಮೇ 12) ದೇಶದಾದ್ಯಂತ ಬಿಡುಗಡೆಯಾಗಲಿದೆ. ಇದರ ಬಳಿಕ ಅವರು ನಿರ್ದೇಶಕ ತ್ರಿವಿಕ್ರಮ ಶ್ರೀನಿವಾಸ್‌ ನಿರ್ದೇಶನದಲ್ಲಿ ನಟಿಸುತ್ತಿದ್ದಾರೆ. 2023ರಲ್ಲಿ ರಾಜಮೌಳಿ ಸಿನಿಮಾದಲ್ಲಿ ಮಹೇಶ್‌ ಬಾಬು ನಾಯಕರಾಗಿದ್ದಾರೆ.

ಈ ನಡುವೆ ಮಹೇಶ್‌ ಬಾಬು ಸಂಭಾವನೆ ಬಗ್ಗೆ ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ತೆಲುಗು ಸಿನಿಮಾಗಳ ಮಾರುಕಟ್ಟೆ ವಿಶ್ಲೇಷಕರಾಗಿರುವ ರಮೇಶ್‌ ಬಾಲಾ ಎಂಬುವರು, ಮಹೇಶ್‌ ಬಾಬು ಸದ್ಯ ಚಿತ್ರವೊಂದಕ್ಕೆ ₹ 35 ರಿಂದ ₹ 50 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದುಹೇಳಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಸಂಭಾವನೆಯಲ್ಲಿ ವ್ಯತ್ಯಾಸ ಇದೆ, ಅವರು ನಟಿಸುವ ಒಂದು ಚಿತ್ರಕ್ಕೆ ಕನಿಷ್ಠ ₹ 35 ಕೋಟಿ ಮೇಲೆ ಸಂಭಾವನೆ ಇರುತ್ತದೆ ಎಂದು ಬಾಲಾ ಹೇಳಿದ್ದಾರೆ.

ಇತ್ತೀಚೆಗೆ ಹಿಂದಿ ಸಿನಿಮಾಗಳಲ್ಲಿ ಏಕೆ ನಟಿಸುವುದಿಲ್ಲ ಎಂಬ ಪ್ರಶ್ನೆಗೂ ಮಹೇಶ್ ಬಾಬು ಉತ್ತರಿಸಿದ್ದಾರೆ. ‘ನನಗೆ ಸಾಕಷ್ಟು ಹಿಂದಿ ಸಿನಿಮಾಗಳ ಆಫರ್‌ಗಳು ಬಂದಿವೆ, ಆದರೆ ನನಗೆ ಬಾಲಿವುಡ್‌ನಲ್ಲಿ ನಟಿಸಲು ಇಷ್ಟವಿಲ್ಲ. ಅಲ್ಲಿ ಹೋಗಿ ನನಗೆ ಸಮಯ ವ್ಯರ್ಥ ಮಾಡಲು ಇಷ್ಟವಿಲ್ಲ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.