ADVERTISEMENT

#HappyBirthdayYash: ರಾಕಿಂಗ್‌ ಸ್ಟಾರ್‌ ಯಶ್‌ಗೆ ಶುಭಾಶಯಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 8 ಜನವರಿ 2023, 10:36 IST
Last Updated 8 ಜನವರಿ 2023, 10:36 IST
ಯಶ್‌
ಯಶ್‌    

ನಟ, ರಾಕಿಂಗ್‌ ಸ್ಟಾರ್‌ ಹುಟ್ಟುಹಬ್ಬವನ್ನು ದೇಶ ವಿದೇಶಗಳಲ್ಲಿ ಅವರ ಅಭಿಮಾನಿಗಳು ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಆದರೆ, ಈ ಸಂಭ್ರಮವನ್ನು ಅಭಿಮಾನಿಗಳ ಜೊತೆ ಆಚರಿಸಬೇಕು ಎಂದುಕೊಂಡಿದ್ದ ಯಶ್ ಅವರು ಎಲ್ಲೂ ಕಾಣ ಸಿಗುವುದಿಲ್ಲ. ಎಲ್ಲಿ ಹೋದರು ಯಶ್‌? ಆ ಕುತೂಹಲವನ್ನು ಕಾಪಿಟ್ಟುಕೊಂಡೇ ಮರೆಯಲ್ಲಿ ಉಳಿದಿದ್ದಾರೆ.

ಯಶ್‌ ಅವರ ಹುಟ್ಟುಹಬ್ಬಕ್ಕೆ ಚಿತ್ರರಂಗ ಶುಭಾಶಯ ಕೋರಿದೆ. ಸೈಮಾ ಸಂಸ್ಥೆ, ಕೆವಿಎನ್‌ ಪ್ರೊಡಕ್ಷನ್ಸ್‌, ಕನ್ನಡ, ಹಾಗೂ ತೆಲುಗು ಅಭಿಮಾನಿ ಸಂಘಗಳು ಯಶ್‌ ಅವರಿಗೆ ಶುಭಾಶಯ ಕೋರಿವೆ. ಟ್ವಿಟರ್‌, ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್‌ನಲ್ಲಿ ಯಶ್‌ಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಅವರ ಚಿತ್ರಗಳು, ಸಿನಿಮಾ ಪೋಸ್ಟರ್‌, ವಿಡಿಯೋ ತುಣುಕುಗಳನ್ನು ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಯಶ್‌ ಅವರು ಹುಟ್ಟಿದ್ದು 1986ರ ಜನವರಿ 8ರಂದು. ಇಂದು ಅವರು 37ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪತ್ನಿ, ನಟಿ ರಾಧಿಕಾ ಪಂಡಿತ್‌ ಹಾಗೂ ಇಬ್ಬರು ಮಕ್ಕಳ ಕುಟುಂಬ ಯಶ್‌ ಅವರದ್ದು. ಯಶ್‌ ಅವರು ಹೊಸದೊಂದು ಯೋಜನೆಯ ಸಿದ್ಧತೆಯಲ್ಲಿದ್ದಾರೆ. ಹಾಗಾಗಿ ಅಭಿಮಾನಿಗಳ ಜೊತೆ ಕಾಣಿಸಿಕೊಳ್ಳಲಾಗಲಿಲ್ಲ ಎಂದು ಅವರ ಟ್ವಿಟರ್‌ ಪೋಸ್ಟ್‌ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.