ADVERTISEMENT

ಟೈಗರ್‌ ಶಾಫ್ ನಟನೆಯ ’ಗಣಪತ್‌’: 2022ರ ಡಿಸೆಂಬರ್‌ನಲ್ಲಿ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2021, 10:06 IST
Last Updated 21 ಆಗಸ್ಟ್ 2021, 10:06 IST
ಪೋಸ್ಟರ್‌
ಪೋಸ್ಟರ್‌   

ಬಾಲಿವುಡ್‌ನ ಬಹು ಬೇಡಿಕೆಯ ನಟ, ಸಿಕ್ಸ್‌ಪ್ಯಾಕ್‌ ಖ್ಯಾತಿಯ ಟೈಗರ್‌ ಶ್ರಾಫ್ ಅಬಿನಯದ ಬಹು ನಿರೀಕ್ಷೆಯ ’ಗಣಪತ್‌’ ಸಿನಿಮಾ 2022ರ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ.

2022ರ ಡಿಸೆಂಬರ್‌ 23ರಂದು ಗಣಪತ್‌ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದುಟೈಗರ್‌ ಶ್ರಾಫ್‌ ಟ್ವೀಟ್‌ ಮಾಡಿದ್ದಾರೆ.

ವಿಕಾಸ್‌ ಬಾಹ್ಲಾ ನಿರ್ದೇಶನದ ಈ ಸಿನಿಮಾದಲ್ಲಿ ಟೈಗರ್‌ ಶ್ರಾಫ್‌ಗೆ ನಾಯಕಿಯಾಗಿ ಕೃತಿ ಸನೋನ್‌ ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬರಲಿದೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಕೇಳಿಬಂದಿದೆ.

ADVERTISEMENT

ಈಗಾಗಲೇ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದೆ ಎಂದು ಗಣಪತ್‌ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ಪೂಜಾ ಸಿನಿಮಾ ಸಂಸ್ಥೆ ಕೂಡ ಟ್ವೀಟ್‌ ಮಾಡಿದೆ.

ಸಿನಿಮಾ ಟೀಸರ್‌ ಬಿಡುಗಡೆಯಾಗಿದ್ದು ಅಭಿಮಾನಿಗಳು ಮತ್ತು ಸಿನಿಮಾ ಪ್ರೀಯರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.