ನಟ ‘ಡಾಲಿ’ ಧನಂಜಯ್ ಹಾಗೂ ನಟಿ ರಚಿತಾ ರಾಮ್ ನಟನೆಯ ‘ಮಾನ್ಸೂನ್ ರಾಗ’ ಸಿನಿಮಾದರಿಲೀಸ್ ಟ್ರೈಲರ್ ಬುಧವಾರ ಬಿಡುಗಡೆ ಆಗಿದೆ.
ರಿಲೀಸ್ ಟ್ರೈಲರ್ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆ ಕಂಡಿದೆ. ಈ ಸಿನಿಮಾ ಇದೇ ಶುಕ್ರವಾರ (ಸೆ.16)ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸಿನಿಮಾದ ಶೇ 80ರಷ್ಟು ಭಾಗವನ್ನು ಮಳೆಯಲ್ಲಿಯೇ ಚಿತ್ರೀಕರಿಸಲಾಗಿದ್ದು, ಮಳೆಯ ಶಬ್ದ ಮತ್ತು ಸಂಗೀತದ ಅನುಭವ ನೀಡಲು ಚಿತ್ರತಂಡ ಸಿದ್ಧವಾಗಿದೆ.
‘ಮಾನ್ಸೂನ್ ರಾಗ’ ಸಿನಿಮಾ ಮೂಲಕ ಧನಂಜಯ್ ಮತ್ತು ರಚಿತಾ ಮೊದಲ ಬಾರಿಗೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಎಸ್.ರವೀಂದ್ರನಾಥ್ ನಿರ್ದೇಶನದ ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ರಚಿತಾ ಅವರು ನಟಿಸಿದ್ದಾರೆ.
ಈ ಚಿತ್ರವನ್ನು ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.