ADVERTISEMENT

ನವೆಂಬರ್ 14ಕ್ಕೆ ತೆರೆಗೆ ಬರಲಿದೆ ‘ಉಡಾಳ’

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 23:50 IST
Last Updated 23 ಅಕ್ಟೋಬರ್ 2025, 23:50 IST
ಪೃಥ್ವಿ ಶ್ಯಾಮನೂರು
ಪೃಥ್ವಿ ಶ್ಯಾಮನೂರು   

ಪೃಥ್ವಿ ಶಾಮನೂರು ನಾಯಕನಾಗಿ ನಟಿಸಿರುವ ‘ಉಡಾಳ’ ಚಿತ್ರ ನವೆಂಬರ್‌ 14ರಂದು ತೆರೆಗೆ ಬರಲಿದೆ. ಯೋಗರಾಜ್‌ ಭಟ್ಟರ ಗರಡಿಯಲ್ಲಿ ಪಳಗಿರುವ ಅಮೋಲ್ ಪಾಟೀಲ್ ನಿರ್ದೇಶನದ ಚಿತ್ರವಿದು. ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರು ಫಿಲ್ಮ್ಸ್‌ ನಿರ್ಮಾಣವಿದೆ.

ಲವ್, ಕಾಮಿಡಿ, ಸಸ್ಪೆನ್ಸ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳಿರುವ ಈ ಚಿತ್ರವಿದು ಎಂದಿದೆ ಚಿತ್ರತಂಡ. ಯೋಗರಾಜ್ ಭಟ್ ಅವರು ಬರೆದಿರುವ ಐದು ಹಾಡುಗಳಿಗೆ ಚೇತನ್ ಡ್ಯಾವಿ ಸಂಗೀತ ನೀಡಿದ್ದು, ಜಸ್ಕರಣ್ ಸಿಂಗ್, ಮಾಳು ನಿಪ್ನಾಳು, ಬಾಳು ಬೆಳಗುಂದಿ, ಕರಿಬಸವ, ಸೃಷ್ಟಿ ಶಾಮನೂರ್ ಹಾಡಿದ್ದಾರೆ.

ಹೃತಿಕ ಶ್ರೀನಿವಾಸ್‌ ಚಿತ್ರದ ನಾಯಕಿ. ಬಲ ರಾಜವಾಡಿ, ಮಾಳು ನಿಪ್ನಾಳ್, ಹರೀಶ್ ಹಿರಿಯೂರು, ಬಿರಾದಾರ್, ಗೋವಿಂದೇಗೌಡ, ಸುಮಿತ್ ಸಂಕೋಜಿ, ವಾದಿರಾಜ ಬಬ್ಲಾದಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ADVERTISEMENT

ಶಿವಶಂಕರ್ ನೂರಂಬಡ ಛಾಯಾಚಿತ್ರಗ್ರಹಣ, ಮಧು ತುಂಬಕೆರೆ ಸಂಕಲನವಿದೆ. ವಿಜಯಪುರದಲ್ಲೇ ಹೆಚ್ಚಿನ ಭಾಗದ ಚಿತ್ರೀಕರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.