ADVERTISEMENT

ಮ್ಯಾನೇಜರ್‌ ಮೇಲೆ ಹಲ್ಲೆ ಆರೋಪ: ಮಲಯಾಳ ನಟ ಉನ್ನಿ ಮುಕುಂದನ್‌ ವಿರುದ್ಧ ಪ್ರಕರಣ

ಪಿಟಿಐ
Published 27 ಮೇ 2025, 6:15 IST
Last Updated 27 ಮೇ 2025, 6:15 IST
<div class="paragraphs"><p>ಉನ್ನಿ ಮುಕುಂದನ್‌</p></div>

ಉನ್ನಿ ಮುಕುಂದನ್‌

   

ಕೊಚ್ಚಿ: ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಲಯಾಳ ನಟ ಉನ್ನಿ ಮುಕುಂದನ್ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮುಕುಂದನ್‌ ವಿರುದ್ಧ ದೂರು ನೀಡಿರುವ ಮ್ಯಾನೇಜರ್‌ ವಿಪಿನ್ ಕುಮಾರ್, ಮತ್ತೊಬ್ಬ ನಟನ ಸಿನಿಮಾವನ್ನು ವಿಮರ್ಷೆ ಮಾಡಿದ್ದಕ್ಕಾಗಿ ನನ್ನ ಕೆನ್ನೆಗೆ ಹೊಡೆದಿದ್ದಾರೆ. ಅಲ್ಲದೆ ಮುಕುಂದನ್‌ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ. ಸೋಮವಾರ ಕಾಕ್ಕನಾಡು ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ಘಟನೆ ನಡೆದಿದೆ ಎಂದು ದೂರಿನಲ್ಲಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಮುಕುಂದನ್ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಈ ಸಂಬಂಧ ಮುಕುಂದನ್‌ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.