ಬೆಂಗಳೂರು: ಭಾರತದ ಗಡಿಭಾಗದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ (ಸರ್ಜಿಕಲ್ ಸ್ಟ್ರೈಕ್) ಆಧರಿಸಿದ ಆದಿತ್ಯ ಧಾರ್ ನಿರ್ದೇಶನದ ಉರಿ ಸಿನಿಮಾದ ಟ್ರೇಲರ್ ಬುಧವಾರ ಬಿಡುಗಡೆಯಾಗಿದೆ.
18 ಸೆಪ್ಟೆಂಬರ್ 2016 ರಂದು ಕಾಶ್ಮೀರದ ಉರಿ ಪಟ್ಟಣದ ಸೇನಾ ನೆಲೆ ಮೇಲೆ ಜೈಷ್ ಇ ಮೊಹಮ್ಮದ್ ಉಗ್ರರು ದಾಳಿ ನಡೆಸಿದ್ದು,ಈ ದಾಳಿಯಲ್ಲಿ 19 ಸೈನಿಕರು ಹುತಾತ್ಮರಾಗಿದ್ದರು. ಈ ಅಮಾನವೀಯ ದಾಳಿಗೆ ತಿರುಗೇಟು ನೀಡಿದ ಭಾರತದ ನಿರ್ದಿಷ್ಟ ದಾಳಿಯ ಬಗ್ಗೆ ಇರುವ ಈ ಚಿತ್ರದ ಟ್ರೇಲರ್ ಈಗ ಟ್ರೆಂಡಿಂಗ್ ಆಗಿದೆ.
ವಿಕಿ ಕೌಶಲ್, ಯಾಮಿ ಗೌತಮ್, ಪರೇಶ್ ರಾವಲ್ ತಾರಾಗಣವಿರುವ ಈ ಚಿತ್ರ ಜನವರಿ 11 ರಂದು ತೆರೆಕಾಣಲಿದೆ.
ಟ್ವಿಟರ್ನಲ್ಲಿ ಟ್ರೆಂಡಿಂಗ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.