ಹರೀಶ್ ರಾಜ್ ನಿರ್ದೇಶಿಸಿ, ನಾಯಕನಾಗಿ ನಟಿಸುತ್ತಿರುವ ‘ವೆಂಕಟೇಶಾಯ ನಮಃ’ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದೆ. ಪಿ.ಜನಾರ್ದನ್ ನಿರ್ಮಾಣದ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.
‘ಮಾರ್ಡನ್ ಪ್ರೀತಿ, ಪ್ರೇಮ, ಪ್ರಣಯ ಪ್ರಸಂಗಗಳ ಸುತ್ತ ಕಥೆ ಸಾಗುತ್ತದೆ. ರೋಮ್ಯಾಂಟಿಕ್ ಲವ್ ಸ್ಟೋರಿಯಾಗಿದ್ದು, ಬೆಂಗಳೂರಿನಲ್ಲಿ ಬಹುಭಾಗ ಚಿತ್ರೀಕರಣಗೊಂಡಿದೆ. ಹುಡುಗಿ ಕೈ ಕೊಟ್ಟಾಗ ಜೀವನವನ್ನು ಸವಾಲಾಗಿ ತೆಗೆದುಕೊಂಡು, ಲವ್ ಮಾಡದೆ, ಹುಡುಗೀರ ಜತೆ ಚೆಲ್ಲಾಟವಾಡುವ ಕಥಾ ನಾಯಕ ವೆಂಕಟೇಶನಿಗೆ ಮತ್ತೆ ಲೈಫ್‌ನಲ್ಲಿ ಲವ್ ಆಗುತ್ತದೆಯಾ ಎಂಬುದೇ ಕಥಾಹಂದರ. ಕಥೆಯನ್ನು ಹಾಸ್ಯಮಯವಾಗಿ ಹೇಳಿದ್ದೇವೆ. ಸಂಪೂರ್ಣ ಮನರಂಜನೀಯ ಚಿತ್ರ’ ಎಂದು ಹರೀಶ್ ರಾಜ್ ಹೇಳಿದ್ದಾರೆ.
ನಾಯಕ ಹರೀಶ್ ರಾಜ್ ಸಾಫ್ಟ್‌ವೇರ್ ಉದ್ಯೋಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ತಾಯಿಯ ಪಾತ್ರದಲ್ಲಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ. ಪ್ರಕೃತಿ ಪ್ರಸಾದ್ ನಾಯಕಿ. ಅಶೋಕ್, ಉಮೇಶ್,
ತಬಲಾ ನಾಣಿ, ನಾಯಕಿಯ ತಾಯಿಯಾಗಿ ಚಿತ್ಕಲಾ ಬಿರಾದಾರ್, ರಾಘು ರಾಮನ ಕೊಪ್ಪ ಸೇರಿದಂತೆ ಹಲವಾರು ಕಲಾವಿದರಿದ್ದಾರೆ.
ಪ್ರವೀಣ್ ಶ್ರೀನಿವಾಸ್‌ಮೂರ್ತಿ ಸಂಗೀತ, ಶಿವಶಂಕರ್ ಛಾಯಾಚಿತ್ರಗ್ರಹಣ, ಜೀವನ್ ಪ್ರಕಾಶ್ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.