ADVERTISEMENT

ಹಿರಿಯ ನಟ ಶ್ರೀನಿವಾಸಮೂರ್ತಿ@ 75

ಬಣ್ಣದ ಬದುಕಿಗೆ 50 ವರ್ಷ

​ಪ್ರಜಾವಾಣಿ ವಾರ್ತೆ
Published 12 ಮೇ 2023, 16:11 IST
Last Updated 12 ಮೇ 2023, 16:11 IST
ಶ್ರೀನಿವಾಸ ಮೂರ್ತಿ
ಶ್ರೀನಿವಾಸ ಮೂರ್ತಿ   

ಅಮೋಘ ಅಭಿನಯದ ಮೂಲಕ ಜನಮನಸೂರೆಗೊಂಡಿರುವ ಹಿರಿಯ ನಟ ಶ್ರೀನಿವಾಸ ಮೂರ್ತಿ ಅವರಿಗೆ 75 ವರ್ಷ. ಅವರ ಬಣ್ಣದ ಬದುಕಿಗೆ 50 ವರ್ಷ.

ಈ ಎರಡು ಸಂಭ್ರಮಗಳನ್ನು ಸಂಭ್ರಮಿಸಲು ಇದೇ ಮೇ 15 ಹಾಗೂ 16 ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ತರಕಾರಿ ಚೆನ್ನಿ’ ಹಾಗೂ ’ಸದಾರಮೆ ಕಳ್ಳ’ ಎಂಬ ಎರಡು ನಾಟಕಗಳನ್ನು ಪ್ರದರ್ಶಿಸಲಾಗುತ್ತಿದೆ.

ಈ ಕುರಿತು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸಮೂರ್ತಿ ಅವರೇ ಈ ಮಾಹಿತಿ ನೀಡಿದರು. ’ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಂದು ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. ಆ ವೇಳೆ ನಾಟಕದಲ್ಲಿ ಅಭಿನಯಿಸಲು ಪ್ರಾರಂಭ ಮಾಡಿದೆ. ಒಂದು ಸಲ ನನ್ನ ನಾಟಕವನ್ನು ನೋಡಿದ ಬಂಗಾರಪ್ಪನವರು ನನ್ನನ್ನು ಅಭಿನಂದಿಸಿದರು. ಅಲ್ಲಿಂದ ನನ್ನ ನಟನೆ ಮತ್ತಷ್ಟು ಹೆಚ್ಚಾಯಿತು’ ಎನ್ನುತ್ತಾ ತಮ್ಮ ಬಣ್ಣದ ಬದುಕಿನ ಆರಂಭದ ದಿನಗಳನ್ನು ನೆನಪಿಸಿಕೊಂಡರು.

ADVERTISEMENT

ತಮಿಳಿನ ಒಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೆ. ಆ ಚಿತ್ರ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕರಿಗೆ ತೊಂದರೆಯಾಯಿತು. ‘ಅಪ್ಪು‘ ಚಿತ್ರದ ನಂತರ ನಿರ್ದೇಶಕ ಪುರಿ ಜಗನ್ನಾಥ್ ಅವರು ತೆಲುಗು ಚಿತ್ರರಂಗಕ್ಕೆ ನನ್ನ ಕರೆದರು. ಆಗ ಇಲ್ಲಿಯೇ ನಾನು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದೆ ಅಲ್ಲಿಗೆ ಹೋಗಲಿಲ್ಲ. ರಜನಿಕಾಂತ್ ಅವರು ಸಹ ನೀವು ಯಾಕೆ ತಮಿಳಿನಲ್ಲಿ ನಟಿಸಬಾರದು? ಎಂದು ಕೇಳುತ್ತಿರುತ್ತಾರೆ’ ಎಂದು ಶ್ರೀನಿವಾಸಮೂರ್ತಿ ಅವರು ಬೇರೆ ಭಾಷೆಗಳಿಂದ ತಮಗೆ ಬಂದಿದ್ದ ಅವಕಾಶಗಳ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.