
ತಿರುವನಂತಪುರ: ಮಲಯಾಳ ಚಿತ್ರರಂಗದ ಹಿರಿಯ ನಟ, ಬರಹಗಾರ, ನಿರ್ಮಾಪಕ ಶ್ರೀನಿವಾಸನ್ (69) ಅವರು ಶನಿವಾರ ನಿಧನರಾಗಿದ್ದಾರೆ.
ಶ್ರೀನಿವಾಸನ್ ಅವರು ಎರ್ನಾಕುಲಂ ತಾಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1977ರಲ್ಲಿ ಪಿ.ಎ. ಬ್ಯಾಕರ್ ನಿರ್ದೇಶನದ ಮಣಿಮುಳಕ್ಕಂ ಚಿತ್ರದ ಮೂಲಕ ಶ್ರೀನಿವಾಸನ್ ಮಳಯಾಳ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಈ ಸಿನಿಮಾ ಶ್ರೀನಿವಾಸನ್‌ಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು.
1984ರಲ್ಲಿ ‘ಒಡರುತ್ತು ಅಮ್ಮಾವ ಆಲಾರಿಯಂ’ ಚಿತ್ರದ ಮೂಲಕ ಉತ್ತಮ ಬರಹಗಾರರಾಗಿ ಶ್ರೀನಿವಾಸನ್ ಗುರುತಿಸಿಕೊಂಡಿದ್ದರು.
ಶ್ರೀನಿವಾಸನ್ ಅವರು ತೀಕ್ಷ್ಣವಾದ ಸಾಮಾಜಿಕ ವ್ಯಾಖ್ಯಾನವನ್ನು ಸುಲಭವಾಗಿ ಅರ್ಥೈಸಬಹುದಾದ ನಿಟ್ಟಿನಲ್ಲಿ ಹಾಸ್ಯಮಯವಾಗಿ ಕಥೆಗಳನ್ನು ಹೆಣೆಯುವ ಮೂಲಕ ಮಲಯಾಳ ಚಿತ್ರರಂಗದಲ್ಲಿ ಗಮನ ಸೆಳೆದಿದ್ದರು.
ಹಾಸ್ಯ, ವಿಡಂಬನೆ ಮತ್ತು ದೈನಂದಿನ ವಾಸ್ತವಗಳ ತೀವ್ರ ಅರಿವಿನಿಂದ ಗುರುತಿಸಲ್ಪಟ್ಟ ಅವರ ಚಿತ್ರಕಥೆಗಳು ಪ್ರೇಕ್ಷಕರಿಗೆ ಹಾಸ್ಯದ ಹೊಸ ಭಾಷೆಯನ್ನು ನೀಡಿದ್ದವು. ಹಾಸ್ಯ ಮತ್ತು ವಿಮರ್ಶೆಯ ಮಿಶ್ರಣದ ಮೂಲಕ ಶ್ರೀನಿವಾಸನ್ ಅವರು ಅಳಿಸಲಾಗದ ಛಾಪು ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.