ADVERTISEMENT

ನಟಿ ವಿಭೂತಿ ‘ಲೈಂಗಿಕ ಸೇವೆ‘ ನೀಡಲಿದ್ದಾರೆ ಎಂಬ ಪೋಸ್ಟ್‌ ಹಾಕಿದವನ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2022, 7:23 IST
Last Updated 7 ಏಪ್ರಿಲ್ 2022, 7:23 IST
ನಟಿ ವಿಭೂತಿ ಠಾಕೂರ್‌
ನಟಿ ವಿಭೂತಿ ಠಾಕೂರ್‌   

ಬಾಲಿವುಡ್‌ ಸಿನಿಮಾ ಹಾಗೂ ಹಿಂದಿ ಧಾರಾವಾಹಿಗಳ ನಟಿ ವಿಭೂತಿ ಠಾಕೂರ್‌ ಅವರ ಮೊಬೈಲ್‌ ಸಂಖ್ಯೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ.

ಕೆಲವು ಅಶ್ಲೀಲ ವೆಬ್‌ಸೈಟ್‌ಗಳಲ್ಲೂ ವಿಭೂತಿ ಠಾಕೂರ್‌ ಅವರ ಖಾಸಗಿ ಮೊಬೈಲ್‌ ನಂಬರ್‌ಹರಿದಾಡುತ್ತಿದೆ. ನಟಿಯು ಲೈಂಗಿಕ ಸೇವೆ ನೀಡಲಿದ್ದಾರೆ ಎಂಬ ಪೋಸ್ಟರ್‌ಗಳು ಕೂಡ ಆನ್‌ಲೈನ್‌ನಲ್ಲಿ ವೈರಲ್‌ ಆಗಿವೆ.

ಮೊಬೈಲ್‌ ಸಂಖ್ಯೆಯನ್ನು ಸೋರಿಕೆ ಮಾಡಿರುವ ವ್ಯಕ್ತಿಯ ವಿರುದ್ಧ ಸೈಬರ್‌ ಕ್ರೈಂ ಪೊಲೀಸರಿಗೆವಿಭೂತಿ ಠಾಕೂರ್‌ ದೂರು ನೀಡಿದ್ದಾರೆ. ಆ ವ್ಯಕ್ತಿಯ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಪ್ರಕಟಿಸಿದ್ದಾರೆ.

ADVERTISEMENT

ನನ್ನ ಮೊಬೈಲ್‌ ಸಂಖ್ಯೆಯನ್ನು ವ್ಯಕ್ತಿಯೊಬ್ಬ ಸೋರಿಕೆ ಮಾಡಿದ್ದು, ನನ್ನ ಬಗ್ಗೆ ಅಶ್ಲೀಲ ಪೋಸ್ಟ್‌ ಹಾಕಿದ್ದಾನೆ. ಆತ ತನ್ನ ಪೋಸ್ಟ್‌ನಲ್ಲಿ ನನಗೆ ಕಿರುಕುಳ ನೀಡುವಂತೆ ಹೇಳಿದ್ದಾನೆ. ಇದರಿಂದ ನನಗೆ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ವೈಯಕ್ತಿಕ ಜೀವನ, ವೃತ್ತಿಯ ಬಗ್ಗೆ ನಾನು ಗಮನ ಹರಿಸಿಕೊಂಡಿದ್ದೆ. ಈ ಘಟನೆ ನನ್ನ ನೆಮ್ಮದಿ ಹಾಳು ಮಾಡಿದೆ. ಇಂತಹ ವರ್ತನೆಗಳಿಂದ ಅವರಿಗೆ ಯಾವ ತೃಪ್ತಿಸಿಗಲಿದೆ?ಇದು ನಾಚಿಕೆಗೇಡು ಎಂದು ವಿಭೂತಿ ಹೇಳಿದ್ದಾರೆ. ಹಲವರು ನನಗೆ ಕರೆ ಮಾಡಿ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಮತ್ತೆ ಕೆಲವರು ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಎಂದು ವಿಭೂತಿ ಬರೆದುಕೊಂಡಿದ್ದಾರೆ.

ಇಂತಹ ವಿಕೃತ ವ್ಯಕ್ತಿಗಳ ವಿರುದ್ಧ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ವಿಭೂತಿ ಹೇಳಿದ್ದಾರೆ.

Caption

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.